ಅಮೆರಿಕ: ಭೀಕರ ಚಳಿಗೆ 34 ಮಂದಿ ಮೃತ್ಯು

Update: 2022-12-26 03:16 GMT

ವಾಷಿಂಗ್ಟನ್:  ಅಮೆರಿಕದಲ್ಲಿ ವ್ಯಾಪಕ ಚಳಿ ಹಾಗೂ ಶೀತಮಾರುತದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿದ್ಯುತ್, ಹೆದ್ದಾರಿ ಹಾಗೂ ವಿಮಾನಯಾನ ಸೇವೆಗೆ ಅಡ್ಡಿಯಾಗಿದ್ದು, 34 ಮಂದಿ ಮೃತಪಟ್ಟಿದ್ದಾರೆ. ನ್ಯೂಯಾರ್ಕ್‌ನಲ್ಲಿ 12 ಮಂದಿ, ಕೊಲರಾಡೊದಲ್ಲಿ 4 ಸೇರಿ ಹವಾಮಾನ ಸಂಬಂಧಿತ ಸಾವುಗಳ ಸಂಖ್ಯೆ 34ಕ್ಕೆ ಏರಿದೆ ಎಂದು ವರದಿಯಾಗಿದೆ.

ಕ್ರಿಸ್‌ಮಸ್ ಸಂಭ್ರಮದ ನಡುವೆ ಶೀತಮಾರುತವು ಲಕ್ಷಾಂತರ ಮಂದಿಯನ್ನು ಸಂಕಷ್ಟಕ್ಕೆ ದೂಡಿದೆ. 

ಲಕ್ಷಾಂತರ ಮಂದಿ ಅಮೆರಿಕನ್ನರು ವಿದ್ಯುತ್ ಇಲ್ಲದೆ ಕ್ರಿಸ್‌ಮಸ್ ಆಚರಿಸಿದ್ದಾರೆ. ಅಮೆರಿಕದ 48 ರಾಜ್ಯಗಳಲ್ಲಿ ತೀವ್ರ ಚಳಿ ಆವರಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ವ್ಯಾಪಕ ಚಳಿ ಹಾಗೂ ಶೀತಮಾರುತದಿಂದ ಯುದ್ಧ ವಲಯದ ರೀತಿಯ ವಾತಾವರಣ ಸೃಷ್ಟಿಯಾಗಿದ್ದು, ರಸ್ತೆ ಬದಿಯಲ್ಲಿರುವ ವಾಹನಗಳ ಸ್ಥಿತಿ ಆಘಾತಕಾರಿಯಾಗಿದೆ. ಬಫೆಲೊ ನಗರದಲ್ಲಿ ಹಿಮಪಾತ ತೀವೃವಾಗಿದ್ದು, ತುರ್ತು ಸೇವೆಗಳನ್ನು ಒದಗಿಸಲೂ ಸಂಕಷ್ಟ ಎದುರಾಗಿದೆ ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಹೇಳಿದ್ದಾರೆ.

Similar News