ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ ಜೊತೆ ಸಂವಹನ ನಡೆಸಿದವರನ್ನು ಪ್ರಶ್ನಿಸುತ್ತಿರುವ ಐಬಿ: ಕಾಂಗ್ರೆಸ್‌ ಆರೋಪ

Update: 2022-12-26 09:53 GMT

ಹೊಸದಿಲ್ಲಿ: ಭಾರತ್‌ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜೊತೆಗೆ ಸಂವಹನ ನಡೆಸಿದವರನ್ನು ಗುಪ್ತಚರ ಬ್ಯುರೋ ಪ್ರಶ್ನಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

"ಅವರು ಎಲ್ಲಾ ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಹಾಗೂ ರಾಹುಲ್‌ಗೆ ಸಲ್ಲಿಸಿದ ಮನವಿಗಳ ಪ್ರತಿಗಳನ್ನು ಕೇಳುತ್ತಿದ್ದಾರೆ," ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಟ್ವೀಟ್‌ ಮಾಡಿದ್ದಾರೆ. "ಯಾತ್ರಾ ಕುರಿತಂತೆ ಗೌಪ್ಯವಾದುದು ಏನೂ ಇಲ್ಲ ಆದರೆ ಜಿ2 (ನರೇಂದ್ರ ಮೋದಿ ಮತ್ತು ಅಮಿತ್‌ ಶಾ) ಕಳವಳಗೊಂಡಿದ್ದಾರೆ," ಎಂದು ಅವರು ಬರೆದಿದ್ದಾರೆ.

ರವಿವಾರ ಕಾಂಗ್ರೆಸ್‌ ಸಂವಹನಾ ಕಾರ್ಯದರ್ಶಿ ವೈಭವ್‌ ವಾಲಿಯಾ ಟ್ವೀಟ್‌ ಮಾಡಿ,  ಡಿಸೆಂಬರ್‌ 23 ರಂದು ಕೆಲ ಅನಧಿಕೃತ ವ್ಯಕ್ತಿಗಳು ಕಂಟೇನರ್‌ ಒಂದರ ಒಳಗೆ ಪ್ರವೇಶಿಸಿರುವ ಕುರಿತು ಭಾರತ್‌ ಜೋಡೋ ಯಾತ್ರಾದಲ್ಲಿ ಭಾಗವಹಿಸಿದ ಕೆಲವರು ದೂರಿದ ನಂತರ  ತಾವು ಸೊಹ್ನಾ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಗಿ ತಿಳಿಸಿದ್ದರು. ಹೀಗೆ ಅನಧಿಕೃತವಾಗಿ ಪ್ರವೇಶಿಸಿದವರು ಗುಪ್ತಚರ ಇಲಾಖೆಯವರು ಎಂದು ಅನೌಪಚಾರಿಕವಾಗಿ ಮಾಹಿತಿ ದೊರಕಿದೆ ಎಂದೂ ಅವರು ಹೇಳಿಕೊಂಡಿದ್ದರು.

Similar News