×
Ad

ರಾಹುಲ್ ವಿದೇಶ ಪ್ರವಾಸಕ್ಕಾಗಿ ಭಾರತ್ ಜೋಡೊ ಯಾತ್ರೆಗೆ ವಿರಾಮ: ಪ್ರಹ್ಲಾದ್ ಜೋಶಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

Update: 2022-12-26 15:10 IST

ಹೊಸದಿಲ್ಲಿ: ದಿಲ್ಲಿಯ ಶೀತ ಗಾಳಿಯ ನಡುವೆ ಟೀ-ಶರ್ಟ್‌ನಲ್ಲಿ ಸೋಮವಾರ ಬೆಳಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಪ್ರಧಾನಿಗಳ ಸ್ಮಾರಕಗಳಿಗ ತೆರಳಿ ನಮನ ಸಲ್ಲಿಸುತ್ತಿರುವ  ದೃಶ್ಯಗಳು ವೈರಲ್ ಆಗುತ್ತಿದೆ.   ರಾಹುಲ್ ಅವರ ವಿದೇಶ ಪ್ರವಾಸಕ್ಕಾಗಿ ಭಾರತ್ ಜೋಡೋ ಯಾತ್ರೆಗೆ ವಿರಾಮ ನೀಡಲಾಗಿದೆ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್, 'ಕ್ರಿಸ್‌ಮಸ್ ರಜೆಗಾಗಿ ರಾಹುಲ್ ಗಾಂಧಿ ವಿದೇಶ ಪ್ರವಾಸ ಮಾಡಲಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದರು. ಆದರೆ ತೀವ್ರ ಚಳಿಯಲ್ಲಿ ಕಂಬಳಿ ಹೊದ್ದುಕೊಂಡಿದ್ದ ಸಚಿವರು ಹಾಗೂ  ಬಿಜೆಪಿ ನಾಯಕರು ದೇಶ ಒಡೆಯುವ ಕಾರ್ಯದಲ್ಲಿ ನಿರತರಾಗಿದ್ದರು. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ಚೌಧರಿ ಚರಣ್ ಸಿಂಗ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರಂತಹ ಮಹಾಪುರುಷರ ಸ್ಮಾರಕಗಳಿಗೆ ರಾಹುಲ್  ಗಾಂಧಿ ಶ್ರದ್ಧಾಂಜಲಿ ಸಲ್ಲಿಸಿದರು’’ ಎಂದರು.

ಸುಪ್ರಿಯಾ ಅವರು  ಬಿಜೆಪಿ ನಾಯಕನ ಹೆಸರನ್ನು ಹೇಳದಿದ್ದರೂ, ಅವರು ಕೇಂದ್ರ ಸಚಿವರಾದ ಜೋಶಿ ಅವರನ್ನು ಗುರಿಯಾಗಿಸಿ ಹೇಳಿಕೆ ನೀಡಿದ್ದಾರೆ.

ಕ್ರಿಸ್‌ಮಸ್ ವಿರಾಮಕ್ಕಾಗಿ ರಾಹುಲ್  ಗಾಂಧಿ ವಿದೇಶ ಪ್ರವಾಸ ಮಾಡುತ್ತಿರುವುದರಿಂದ ಭಾರತ್ ಜೋಡೊ ಯಾತ್ರೆಗೆ ವಿರಾಮ ನೀಡಲಾಗಿದೆ  ಎಂದು ಜೋಶಿ ಹೇಳಿಕೆ ನೀಡಿದ್ದರು.

Similar News