ವಿಕಲಚೇತನರ ರಿಯಾಯಿತಿ ಬಸ್‍ಪಾಸ್‍ಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನ

Update: 2022-12-26 14:14 GMT

ಬೆಂಗಳೂರು, ಡಿ. 26: 2023ನೇ ಸಾಲಿನ ವಿಕಲಚೇತನರ ರಿಯಾಯಿತಿ ಬಸ್ ಪಾಸಿಗಾಗಿ ಅರ್ಹ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. 

ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ತಾವು ಆಯ್ಕೆ ಮಾಡಿಕೊಂಡ ಬಸ್‍ನಿಲ್ದಾಣಗಳಿಗೆ ತೆರಳಿ ದಾಖಲೆಗಳನ್ನು ಸಲ್ಲಿಸಿ ಪಾಸ್‍ಗಳನ್ನು ಪಡೆಯಬಹುದಾಗಿದೆ. ರಿಯಾಯಿತಿ ಪಾಸ್‍ಗಳನ್ನು ಡಿ.26ರಿಂದ ನೂತನ ಪಾಸುಗಳನ್ನು ವರ್ಷವಿಡಿ ವಿತರಣೆ ಮಾಡಲಾಗುವುದು. ಕಳೆದ ಸಾಲಿನ ವಿಕಲಚೇತನರ ಬಸ್‍ಪಾಸ್‍ಗಳನ್ನು 2023ರ ಫೆಬ್ರವರಿ 28ರೊಳಗೆ ನವೀಕರಿಸಿಕೊಳ್ಳುವುದು.

ರಿಯಾಯಿತಿ ಪಾಸಿನ ದರ 660 ರೂ.ಗಳಾಗಿದ್ದು, ವಿಕಲಚೇತನರು ಬಂದು ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು ಕಾಲಮಿತಿ ನೀಡುವ ಉದ್ದೇಶದಿಂದ 2022ನೆ ಸಾಲಿನಲ್ಲಿ ವಿತರಿಸಿ 2022ರ ಡಿ.31ರ ವರೆಗೆ ಮಾನ್ಯತೆ ಇರುವ ವಿಕಲಚೇತನರ ಪಾಸ್‍ಗಳನ್ನು 2023ರ ಫೆಬ್ರವರಿ 28ರ  ವರೆಗೆ ಮಾನ್ಯ ಮಾಡಲಾಗುವುದು.

ನೂತನ ಪಾಸ್‍ಗಳನ್ನು ಕೆಂಪೇಗೌಡ ಬಸ್‍ನಿಲ್ದಾಣದಲ್ಲಿ ಮಾತ್ರ ವಿತರಣೆ ಮಾಡಲಾಗುವುದು. ಕಳೆದ ಸಾಲಿನ ಬಸ್‍ಪಾಸ್‍ಗಳನ್ನು ಕೆಂಪೇಗೌಡ ಬಸ್‍ನಿಲ್ದಾಣ, ಬನಶಂಕರಿ ಟಿಟಿಎಂಸಿ, ವಿಜಯನಗರ ಟಿಟಿಎಂಸಿ, ದೊಮ್ಮಲೂರು ಟಿಟಿಎಂಸಿ, ಶಿವಾಜಿನಗರ ಬಸ್‍ನಿಲ್ದಾಣ, ಜಯನಗರ ಟಿಟಿಎಂಸಿ, ಯಶವಂತಪುರ ಟಿಟಿಎಂಸಿ, ಶಾಂತಿನಗರ ಟಿಟಿಎಂಸಿ, ಕೆಂಗೇರಿ ಟಿಟಿಎಂಸಿ, ವೈಟ್‍ಫೀಲ್ಡ್ ಟಿಟಿಎಂಸಿ, ಕೃಷ್ಣರಾಜ ಮಾರುಕಟ್ಟೆ ಬಸ್‍ನಿಲ್ದಾಣ, ಹೊಸಕೋಟೆ ಬಸ್‍ನಿಲ್ದಾಣ, ಯಲಹಂಕ ಬಸ್‍ನಿಲ್ದಾಣಗಳಲ್ಲಿ ನವೀಕರಿಸಲಾಗುವುದೆಂದು ಬಿಎಂಟಿಸಿ ಪ್ರಕಟನೆ ತಿಳಿಸಿದೆ.

Similar News