ವಿಶ್ವದಾದ್ಯಂತದ ಕ್ರಿಶ್ಚಿಯನ್ನರಿಗೆ ಅಭಿನಂದನೆ ತಿಳಿಸಿದ ಈಜಿಪ್ಟ್‌ನ ಅಝ್ಹರ್ ಗ್ರ್ಯಾಂಡ್ ಶೇಖ್ ಅಹ್ಮದ್ ಅಲ್-ತಯ್ಯೆಬ್

Update: 2022-12-26 14:32 GMT

ಕೈರೋ: ಈಜಿಪ್ಟ್‌ನ ಅಝ್ಹರ್ ಗ್ರ್ಯಾಂಡ್ ಶೇಖ್ ಆಗಿರುವ ಅಹ್ಮದ್ ಅಲ್-ತಯ್ಯೆಬ್ ಅವರು ಕ್ರಿಸ್‌ಮಸ್ ಸಂದರ್ಭದಲ್ಲಿ ವಿಶ್ವದಾದ್ಯಂತದ ಕ್ರಿಶ್ಚಿಯನ್ನರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ವಿಶ್ವದ ಎಲ್ಲೆಡೆ ಸುರಕ್ಷತೆ ಮತ್ತು ಸ್ಥಿರತೆ ನೆಲೆಸಲಿ ಎಂದು ಅವರು ದೇವರಲ್ಲಿ ಪ್ರಾರ್ಥಿಸಿರುವುದಾಗಿ egyptindependent.com ವರದಿ ಮಾಡಿದೆ. 

  “ನನ್ನ ಆತ್ಮೀಯ ಸಹೋದರರು ಮತ್ತು ಸ್ನೇಹಿತರು, ಪೋಪ್ ಫ್ರಾನ್ಸಿಸ್, ಪೋಪ್ ತವಾಡ್ರೋಸ್ II, ಕ್ಯಾಂಟರ್‌ಬರಿ ಆರ್ಚ್‌ಬಿಷಪ್ ಜಸ್ಟಿನ್ ವೆಲ್ಬಿ, ಕಾನ್ಸ್ಟಾಂಟಿನೋಪಲ್‌ನ ಪ್ಯಾಟ್ರಿಯಾರ್ಕ್ ಬಾರ್ತಲೋಮೆವ್ I, ಚರ್ಚ್ ಗಳ ನಾಯಕರು, ಪೂರ್ವ ಮತ್ತು ಪಶ್ಚಿಮದಲ್ಲಿರುವ ಕ್ರಿಶ್ಚಿಯನ್ ಸಹೋದರರನ್ನು ಕ್ರಿಸ್ಮಸ್ ಹಬ್ಬದಂದು ನಾನು ಅಭಿನಂದಿಸುತ್ತೇನೆ. ” ಎಂದು ತಯ್ಯೆಬ್‌ ಅವರು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ. 

  "ಭ್ರಾತೃತ್ವ ಮತ್ತು ಶಾಂತಿಯ ಧ್ವನಿಯು ಗಟ್ಟಿಯಾಗಲಿ. ಸುರಕ್ಷತೆ ಮತ್ತು ಸ್ಥಿರತೆ ಎಲ್ಲೆಡೆ ಮೇಲುಗೈ ಸಾಧಿಸಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ." ಎಂದು ಅವರು ಸೇರಿಸಿದ್ದಾರೆ. 

ಆರ್ಥೊಡಾಕ್ಸ್ ಚರ್ಚ್, ಇವಾಂಜೆಲಿಕಲ್ ಪಂಥ ಮತ್ತು ಕಾಪ್ಟಿಕ್ ಕ್ಯಾಥೋಲಿಕ್‌ಗಳು ಸೇರಿದಂತೆ ಈಜಿಪ್ಟ್‌ನ ವಿವಿಧ ಚರ್ಚುಗಳಲ್ಲಿ ಜನವರಿ ಏಳನೇ ತಾರೀಖಿನಂದು ಕ್ರಿಸ್ಮಸ್ ಅನ್ನು ಆಚರಿಸಲಾಗುತ್ತವೆ.

Similar News