ಅಮೃತಸರದಲ್ಲಿ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್

Update: 2022-12-26 15:43 GMT

ಅಮೃತಸರ,ಡಿ.26: ಗಡಿರಕ್ಷಣಾ ಪಡೆ (BSF)ಯು ರವಿವಾರ ಪಾಕಿಸ್ತಾನದ ಡ್ರೋನ್ ವೊಂದನ್ನು ಅಮೃತಸರ ಜಿಲ್ಲೆಯ ರಾಜತಾಲ್(Rajtal) ಗ್ರಾಮದ ವ್ಯಾಪ್ತಿಯಲ್ಲಿಯ ಅಂತರರಾಷ್ಟ್ರೀಯ ಗಡಿಯಲ್ಲಿ ಹೊಡೆದುರುಳಿಸಿದೆ.

ರಾತ್ರಿ 7:40 ಸುಮಾರಿಗೆ ಈ ಘಟನೆ ನಡೆದಿದ್ದು,ಗಡಿಬೇಲಿಗೆ ಸಮೀಪದ ಹೊಲದಿಂದ ಡ್ರೋನ್ ನ ವಶಪಡಿಸಿಕೊಳ್ಳಲಾಗಿದೆ. ಅದು ಪ್ರದೇಶದಲ್ಲಿ ಯಾವುದಾದರೂ ವಸ್ತುಗಳನ್ನು ಬೀಳಿಸಿದೆಯೇ ಎನ್ನುವುದನ್ನು ಪತ್ತೆ ಹಚ್ಚಲು ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದರು.

ಶುಕ್ರವಾರ ಅಮೃತಸರ ವಿಭಾಗದ ಪುಲ್ಮೋರನ್ ಗಡಿಯ ಬಳಿ ಪಾಕ್ ಡ್ರೋನ್ವೊಂದು ಹಾರಾಡುತ್ತಿದ್ದನ್ನು ಪತ್ತೆ ಹಚ್ಚಲಾಗಿತ್ತು.

ಡಿ.21 ಅಮೃತಸರದ ಡಾವೋಕೆ ಪೋಸ್ಟ್ ಬಳಿ ಭದ್ರತಾ ಸಿಬ್ಬಂದಿಗಳು ಪಾಕ್ ಡ್ರೋನ್ವೊಂದಕ್ಕೆ ಗುಂಡು ಹಾರಿಸಿದ್ದರಾದರೂ ಅದು ಗಡಿಯ ಇನ್ನೊಂದು ಭಾಗದಲ್ಲಿ ಬಿದ್ದಿತ್ತು. ಡಿ.15ರಂದು ತರ್ನ ತರನ್ ಜಿಲ್ಲೆಯಲ್ಲಿ ಪಾಕ್ ಡ್ರೋನ್ ಅನ್ನು ಬಲವಂತದಿಂದ ಕೆಳಕ್ಕಿಳಿಸಲಾಗಿತ್ತು.

Similar News