ಗುರುರಾಘವೇಂದ್ರ ಬ್ಯಾಂಕ್ ಹಗರಣ: ಮೇಲ್ಮನೆಯಲ್ಲಿ ಧರಣಿ

Update: 2022-12-27 16:19 GMT

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.27: ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‍ನಅವ್ಯವಹಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಕಾಂಗ್ರೆಸ್ ಸದಸ್ಯರು ಪರಿಷತ್ತಿನ ಬಾವಿಗಿಳಿದು ಧರಣಿ ನಡೆಸಿದರು. 

ಮಂಗಳವಾರ ವಿಧಾನ ಪರಿಷತ್ತಿನ ನಿಯಮ 330ರ ಅಡಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯಯು.ಬಿ. ವೆಂಕಟೇಶ್, ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‍ ಅವ್ಯವಹಾರ ಪ್ರಕರಣ ಬೆಳಕಿಗೆ ಬಂದು 3 ವರ್ಷ ಕಳೆದಿವೆ. ಇದುವರೆಗೆ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ. ಆದ್ದರಿಂದ ಪ್ರಕರಣದತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ಸಹಕಾರ ಸಚಿವರುಒಪ್ಪದಿದ್ದಾಗ, ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದರು.ಕಾಣದ ಕೈಗಳು, ಸಂಸದರು ಮತ್ತು ಸಚಿವರೊಬ್ಬರಒತ್ತಡಕ್ಕೆ ಒಳಗಾಗಿ ಸಿಬಿಐಗೆ ಒಪ್ಪಿಸಲು ಸಹಕಾರ ಸಚಿವರು ಹಿಂದೇಟು ಹಾಕುತ್ತಿದ್ದಾರೆಎಂದು ಆರೋಪಿಸಿದರು.

ಆಗ ಪ್ರತಿಕ್ರಿಯಿಸಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಅತಿ ಹೆಚ್ಚು 2,282.08 ಕೋಟಿ ಸಾಲ ಪಡೆದ 14 ಜನರ ಮಾಹಿತಿ ಮತ್ತು ಲಭ್ಯವಿರುವ ದಾಖಲೆಗಳೊಂದಿಗೆ ತನಿಖಾ ವರದಿಯನ್ನು ಸಿಐಡಿ ಮತ್ತುಜಾರಿ ನಿರ್ದೇಶನಾಲಯ (ಇಡಿ)ಕ್ಕೆ ಕಳುಹಿಸಲಾಗಿದೆ. ಜಪ್ತಿ ಮಾಡಿದ ಆಸ್ತಿಯನ್ನೂ ಹರಾಜು ಮಾಡಲು ಸಿದ್ಧತೆ ನಡೆದಿದೆ.ಜತೆಗೆ, ಸಿಒಡಿ ಅಧಿಕಾರಿಗಳು ಸಮರ್ಥರಾಗಿದ್ದು, ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್‍ನ ಪಿ.ಆರ್.ರಮೇಶ್, ಸಿಬಿಐಗೆ ಒಪ್ಪಿಸುವುದೇ ಸೂಕ್ತ.ಆದರೆ, ಸರಕಾರ ಹಿಂದೇಟು ಹಾಕುತ್ತಿರುವುದರ ಹಿಂದೆ ಸಂಸದರೊಬ್ಬರು ಮತ್ತು ಸಚಿವರೊಬ್ಬರಒತ್ತಡಇದೆಎಂದು ಆರೋಪಿಸಿದರು.

ಇದಕ್ಕೆ ಕೆರಳಿದ ಸಚಿವರು, ಆಧಾರರಹಿತಆರೋಪ ಸಲ್ಲದು.ಸಿಬಿಐಗೆ ಒಪ್ಪಿಸಲು ನಮ್ಮಅಭ್ಯಂತರವೇನೂಇಲ್ಲ. ಆದರೆ, ಪ್ರಕರಣದತನಿಖೆಯು ಶೇ.80ರಷ್ಟು ಪೂರ್ಣಗೊಂಡಿದೆಎಂದರು.

ಆದರೆ, ಇದಕ್ಕೆಒಪ್ಪದ ಸದಸ್ಯರು ಪ್ರತಿಭಟನೆ ಮುಂದುವರಿದರು.ಆಗ ಮಾತನಾಡಿದ ಸಚಿವರು, `ಜನವರಿ ಮೊದಲ ವಾರದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‍ಬಿಐ, ಸಿಒಡಿ, ಸಹಕಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆಕರೆಯಲಾಗುವುದು.ಸಿಬಿಐ ತನಿಖೆ ಅನಿವಾರ್ಯ ಅನಿಸಿದರೆ, ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗುವುದುಎಂದು ವಿಶ್ವಾಸ ವ್ಯಕ್ತಪಡಿಸಿದರು.

Similar News