ಬೈಂದೂರು: ಸಾವಿನಲ್ಲೂ ಒಂದಾದ ದಂಪತಿ

Update: 2022-12-27 16:49 GMT

ಬೈಂದೂರು: ಬೈಂದೂರಿನ ವೃದ್ಧ ದಂಪತಿಯೊಂದು ಸಾವಿನಲ್ಲೂ ಒಂದಾದ ಘಟನೆ ವರದಿಯಾಗಿದೆ. ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಸಣ್ಣ ಬೆಸ್ಕೂರು ಮನೆ ನಿವಾಸಿ ಮುಡೂರ ದೇವಾಡಿಗ (85) ವಯೋಸಹಜ ಅನಾರೋಗ್ಯದಿಂದ ರವಿವಾರ ರಾತ್ರಿ ಪತ್ನಿ ಮನೆಯಾದ ಬಿಜೂರಿನಲ್ಲಿ ನಿಧನರಾಗಿದ್ದಾರೆ. ಪತಿಯ ಅಂತ್ಯ ಸಂಸ್ಕಾರದ ಸಿದ್ಧತೆಗಳ ನಡುವೆ ಪತ್ನಿ ಕೃಷ್ಣಿ ದೇವಾಡಿಗ (77) ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಮನೆಯೊಳಗೆ ಮುಡೂರ ದೇವಾಡಿಗರ ಮೃತದೇಹವನ್ನಿಡಲಾಗಿತ್ತು. ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿತ್ತು. ಸಿದ್ದತೆಗಳ ನಡುವೆಯೇ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಮುಡೂರ ಅವರ ಪತ್ನಿ ಕೂಡ ನಿಧನರಾಗಿದ್ದು, ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.

ದಂಪತಿ ಐವರು ಪುತ್ರರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮಲ್ಪೆ: ಬಲೆಗೆ ಬಿದ್ದ 22 ಕೆ.ಜಿ ಗೋಳಿ ಮೀನು 2.30 ಲಕ್ಷ ರೂ.ಗೆ ಹರಾಜು..!

Similar News