ಸಸ್ಯಾಹಾರಿಗೆ ಮಾಂಸಾಹಾರ ಬಡಿಸಿದ ಆರೋಪ: ರೆಸ್ಟೋರೆಂಟ್ ಮಾಲಕರ ವಿರುದ್ಧ ಕೇಸ್
ಇಂದೋರ್: ಸಸ್ಯಾಹಾರಿಯೊಬ್ಬರಿಗೆ ಮಾಂಸಾಹಾರ ಬಡಿಸಿದ ಆರೋಪದ ಹಿನ್ನೆಲೆಯಲ್ಲಿ ಇಂದೋರ್‌ನಲ್ಲಿ ರೆಸ್ಟೋರೆಂಟ್ ಮಾಲಕರ ವಿರುದ್ಧ ಮಧ್ಯಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದೂರುದಾರ ಆಕಾಶ್ ದುಬೆ ಅವರು ವೆಜ್ ಬಿರಿಯಾನಿಗೆ ಆರ್ಡರ್ ಮಾಡಿದ್ದರು. ಆದರೆ ವಿಜಯ್ ನಗರ ಪ್ರದೇಶದ ರೆಸ್ಟೋರೆಂಟ್‌ನಲ್ಲಿ ಅವರಿಗೆ ನೀಡಲಾಗಿರುವ ವೆಜ್ ಬಿರಿಯಾನಿ ಪ್ಲೇಟ್ ನಲ್ಲಿ ಮೂಳೆ ಕಂಡುಬಂದಿದೆ.
ದುಬೆ ಅವರು ಈ ಬಗ್ಗೆ ರೆಸ್ಟೋರೆಂಟ್ ಮ್ಯಾನೇಜರ್ ಹಾಗೂ ಸಿಬ್ಬಂದಿಗೆ ದೂರು ನೀಡಿದರು, ನಂತರ ಅವರು ಕ್ಷಮೆಯಾಚಿಸಿದರು.
ಕ್ಷಮೆ ಕೋರಿದ ಹೊರತಾಗಿಯೂ ಆಕಾಶ್ ದುಬೆ ಅವರು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
"ವಿಜಯ್ ನಗರ ಪೊಲೀಸರು ರೆಸ್ಟೋರೆಂಟ್ ಮ್ಯಾನೇಜರ್ ಸ್ವಪ್ನಿಲ್ ಗುಜರಾತಿ ವಿರುದ್ಧ ಸೆಕ್ಷನ್ 298 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಸ್ತುತ ಈ ವಿಷಯವನ್ನು ತನಿಖೆ ನಡೆಸಲಾಗುತ್ತಿದೆ. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಉಪ ಪೊಲೀಸ್ ಆಯುಕ್ತ ಸಂಪತ್ ಉಪಾಧ್ಯಾಯ ANIಗೆ ತಿಳಿಸಿದ್ದಾರೆ.