ಉದ್ಯೋಗಿಗಳ ಸಂಬಳ ಕಡಿತಗೊಳಿಸುವಂತೆ ಏರ್ ಇಂಡಿಯಾದೊಂದಿಗೆ ಕೇಳಿಕೊಂಡ ಸರಕಾರ: ಕಾರಣವೇನು?
ಹೊಸದಿಲ್ಲಿ: ಸಂಸ್ಥೆಯ ಮಾರಾಟದ ಬಳಿಕವೂ ವಸಂತ್ ವಿಹಾರ್ ಕಾಲನಿಯಲ್ಲಿ ಹೆಚ್ಚು ತಂಗಿದ್ದಕ್ಕಾಗಿ ಏರ್‌ಲೈನ್‌ನ ಉದ್ಯೋಗಿಗಳಿಗೆ ಶುಲ್ಕ ವಿಧಿಸಲು ಟಾಟಾ ನೇತೃತ್ವದ ಏರ್ ಇಂಡಿಯಾದ ಆಡಳಿತವನ್ನು ಸರ್ಕಾರ ಕೇಳಿಕೊಂಡಿದೆ ಎಂದು ತಿಳಿದು ಬಂದಿದೆ. ಅಕ್ಟೋಬರ್‌ನಿಂದ ಅವರ ವೇತನದಿಂದ ಮೊತ್ತವನ್ನು ಕಡಿತಗೊಳಿಸುವಂತೆ ಆಡಳಿತ ಮಂಡಳಿಗೆ ತಿಳಿಸಲಾಗಿದೆ.
ವಸತಿ ಸಂಕೀರ್ಣಗಳು ಹೂಡಿಕೆ ಹಿಂಪಡೆಯುವಿಕೆಯ ಭಾಗವಾಗಿರಲಿಲ್ಲ ಮತ್ತು ಸರ್ಕಾರವು ಇತರ ರಿಯಲ್ ಎಸ್ಟೇಟ್ ಆಸ್ತಿಗಳೊಂದಿಗೆ ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ಸ್ ಲಿಮಿಟೆಡ್ ಅಡಿಯಲ್ಲಿ ಆಸ್ತಿಗಳನ್ನು ಸ್ಥಳಾಂತರಿಸಿದೆ. ಸರಕಾರ ವಸೂಲಿ ಮಾಡಿರುವ ಉಳಿದ 60,000 ಕೋಟಿ ರೂ. ಸಾಲವನ್ನು ತೀರಿಸುವ ಸಲುವಾಗಿ ಅವುಗಳನ್ನು ಮಾರಾಟ ಮಾಡಲು ಯೋಜಿಸಿದೆ.
ಈ ತಿಂಗಳಿನಿಂದ ಸರ್ಕಾರದ ನಿರ್ದೇಶನದಂತೆ ಸಂಬಳ ಕಡಿತಗೊಳಿಸಲಾಗುವುದು ಎಂದು ಬೆಳವಣಿಗೆಯ ಬಗ್ಗೆ ತಿಳಿದ ವ್ಯಕ್ತಿಯೊಬ್ಬರು ಹೇಳಿದ್ದಾರೆ. “ಕಡಿತಗಳು ತಿಂಗಳಿಗೆ 95,000 ರೂ. ತನಕ ಇರಬಹುದು. ಅನೇಕ ಉದ್ಯೋಗಿಗಳಿಗೆ ಸಂಬಳವೇ ಸಿಗುವುದಿಲ್ಲ ಎಂದು ವಸಂತ ವಿಹಾರ್ ಕಾಲೋನಿಯಲ್ಲಿ ವಾಸವಾಗಿರುವ ಏರ್ ಇಂಡಿಯಾ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಎಐ ಇಂಜಿನಿಯರಿಂಗ್ ಸರ್ವೀಸ್ ಲಿಮಿಟೆಡ್‌ನ (ಎಐಇಎಸ್‌ಎಲ್) 58 ಉದ್ಯೋಗಿಗಳು ರಾಷ್ಟ್ರ ರಾಜಧಾನಿಯ ವಸಂತ್ ವಿಹಾರ್‌ನಲ್ಲಿರುವ ಏರ್ ಇಂಡಿಯಾ ಕಾಲೋನಿಯಲ್ಲಿ ತಮ್ಮ ವಸತಿ ಸೌಕರ್ಯಗಳನ್ನು, ರಜೆಯ ನೋಟಿಸ್‌ಗಳನ್ನು ಪ್ರಶ್ನಿಸಿ ದಿಲ್ಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ.
ಈ ವರ್ಷ ಬೋರ್ಡ್ ಪರೀಕ್ಷೆಗಳನ್ನು ಎದುರಿಸಲಿರುವ ಅನೇಕ ಕುಟುಂಬಗಳು ಮತ್ತು ಮಕ್ಕಳನ್ನು ಹೊಂದಿರುವ ಕಾರಣ ಕಾಲನಿಯಲ್ಲಿ ಉಳಿಯಲು ಸ್ವಲ್ಪ ಸಮಯ ಕೇಳಿದ್ದೇವೆ ಎಂದು ಕಾಲನಿಗಳಲ್ಲಿ ಉಳಿದುಕೊಂಡಿರುವ ನೌಕರರು ಹೇಳಿದ್ದಾರೆ.
ಎಐಎಎಚ್‌ಎಲ್‌ನ ಸಿಎಂಡಿ ವಿಕ್ರಮ್ ದೇವ್ ದತ್ ಅವರು ಈ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಏರ್ ಇಂಡಿಯಾ ಎರಡು ಪ್ರಮುಖ ವಸತಿ ಸಂಕೀರ್ಣಗಳನ್ನು ದಿಲ್ಲಿ ಮತ್ತು ಮುಂಬೈನಲ್ಲಿ ಹೊಂದಿವೆ.