ಉಡುಪಿ: ಪ್ರವಾಸಿಗರ ದಟ್ಟಣೆಯಿಂದ ಸಂಚಾರ ಅಸ್ತವ್ಯಸ್ತ

Update: 2022-12-28 15:55 GMT

ಉಡುಪಿ: ಶಾಲೆಗಳಿಗೆ ರಜೆಗಳಿರುವ ಹಾಗೂ ವರ್ಷದ ಕೊನೆಯ ದಿನಗಳ ರಜೆಯ ಕಾರಣ ಪ್ರವಾಸಕ್ಕಾಗಿ ಉಡುಪಿ ಜಿಲ್ಲೆಗೆ ಅದರಲ್ಲೂ ಮಲ್ಪೆಗೆ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಇನ್ನೊಂದೆಡೆ  ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ಪ್ರವಾಸದ ಹಿನ್ನೆಲೆಯೂ ರಾಜ್ಯದ ವಿವಿದೆಡೆಯಿಂದ ಪ್ರವಾಸಿಗರು ಮಲ್ಪೆಯತ್ತ ಆಗಮಿಸುತ್ತಿದ್ದು ಸಂಚಾರ ದಟ್ಟಣೆ ಹೆಚ್ಚಿದೆ.

ಬುಧವಾರ ಸಂಜೆ 7 ಗಂಟೆ ಬಳಿಕ ಮಲ್ಪೆಯಿಂದ ಕರಾವಳಿ ಬೈಪಾಸ್ ತನಕ ಸಂಚಾರ ಅಸ್ತವ್ಯಸ್ತವಾಗಿದ್ದು ಕಿಲೋಮೀಟರ್ ದೂರಕ್ಕೂ ಪ್ರವಾಸಿ ಬಸ್ಸುಗಳು, ಟೆಂಪೋ, ಮಿನಿ ಬಸ್, ಲಘು ವಾಹನಗಳು ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು. 

ಇದರಿಂದಾಗಿ ಕರಾವಳಿ ಜಂಕ್ಷನ್ ಬಳಿಯೂ ಟ್ರಾಫಿಕ್ ಜಾಮ್ ಆಗಿದ್ದರಿಂದ ಮಂಗಳೂರು-ಉಡುಪಿ-ಕುಂದಾಪುರ ಮಾರ್ಗದ ಸರ್ವೀಸ್ ರಸ್ತೆಗಳು, ಉಡುಪಿ-ಕರಾವಳಿ ಜಂಕ್ಷನ್ ರಸ್ತೆಯಲ್ಲಿ ವಾಹನಗಳ ದಟ್ಟಣೆಯಾಗಿತ್ತು.

Similar News