ದಿಲ್ಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಲು ಕಮ್ಯೂನಿಟಿ ಸೆಂಟರಿನ ಕೌನ್ಸಿಲರ್ ಡಾ. ವಜೀದಾ ಬಾನು ಆಯ್ಕೆ
Update: 2022-12-28 22:47 IST
ಪುತ್ತೂರು: 2023 ನೇ ಸಾಲಿನಲ್ಲಿ ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಲು ಪುತ್ತೂರಿನ ಡಾ. ವಜೀದಾ ಬಾನು ಆಯ್ಕೆಯಾಗಿದ್ದಾರೆ.
ಎನ್ ಎಸ್ ಎಸ್ ವತಿಯಿಂದ ನಡೆದ ದಕ್ಷಿಣ ಪ್ರಾಂತೀಯ ಪ್ರೀ ಆರ್ ಡಿ ತರಬೇತಿ ಶಿಬಿರದಲ್ಲಿ ಕರ್ನಾಟಕದಿಂದ ಆಯ್ಕೆಗೊಂಡಿರುವ ಏಳು ಮಂದಿಯಲ್ಲಿ ಇವರು ಒಬ್ಬರಾಗಿದ್ದಾರೆ.
ಇವರು ಪುತ್ತೂರಿನ ಮೊಟ್ಟೆತ್ತಡ್ಕ ಇಸ್ಮಾಯಿಲ್ ಮತ್ತು ಸುಫಿಯಾ ಬಾನು ದಂಪತಿಗಳ ಪುತ್ರಿ. ಎ ಜೆ ದಂತ ವೈದ್ಯಕೀಯ ಕಾಲೇಜಿನಿಂದ ದಂತ ವೈದ್ಯಕೀಯ ಪದವಿ ಪಡೆದಿರುವ ಇವರು, ಇತ್ತೀಚೆಗೆ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಆರು ವಿಷಯಗಳಲ್ಲಿ ರ‍್ಯಾಂಕ್ ಪಡೆದಿದ್ದಾರೆ.
ಪುತ್ತೂರು ಕಮ್ಯೂನಿಟಿ ಸೆಂಟರ್‌ನ ಕೌನ್ಸಿಲರ್ ಆಗಿರುವ ಇವರು ಹಲವಾರು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ಪ್ರೇರಣೆ ನೀಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದ್ದಾರೆ ಎಂದು ಪುತ್ತೂರು ಕಮ್ಯೂನಿಟಿ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಹನೀಫ್ ಪುತ್ತೂರು ತಿಳಿಸಿದ್ದಾರೆ.