ಕುದ್ರೋಳಿಯಲ್ಲಿ ಸೀರತ್ ಸಮಾವೇಶ

Update: 2022-12-29 04:22 GMT

ಮಂಗಳೂರು, ಡಿ.29: ಯುನಿವೆಫ್ ಕರ್ನಾಟಕದ 'ಮಾನವ ಸಮಾಜ, ಸಂಸ್ಕೃತಿ  ಮತ್ತು ಪ್ರವಾದಿ ಮುಹಮ್ಮದ್ (ಸ)' ಎಂಬ ಕೇಂದ್ರೀಯ ವಿಷಯದಲ್ಲಿ ನಡೆಯುತ್ತಿರುವ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನದ ಪ್ರಯುಕ್ತ ಕುದ್ರೋಳಿ ಶಾಖೆಯ ವತಿಯಿಂದ ಕುದ್ರೋಳಿ ಎ1 ಭಾಗ್ ನಲ್ಲಿ ಸೀರತ್ ಸಮಾವೇಶ ನಡೆಯಿತು.

'ನಮ್ಮ ಜೀವನ ಮತ್ತು ಪ್ರವಾದಿ (ಸ)ರ ಬೋಧನೆಗಳು' ಎಂಬ ವಿಷಯದಲ್ಲಿ ಮುಖ್ಯ ಭಾಷಣ ಮಾಡಿದ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, 'ಅಲ್ಲಾಹನು ನಿಷಿದ್ಧಗೊಳಿಸಿದ ಬಡ್ಡಿ ಮುಂತಾದ ಸಾಮಾಜಿಕ ಕೆಡುಕುಗಳನ್ನು ಮುಸ್ಲಿಮ್ ಸಮುದಾಯ ಗಂಭೀರವಾಗಿ ತೆಗೆದುಕೊಳ್ಳದೆ ಹೊಂದಾಣಿಕೆಯ ತತ್ವವನ್ನು ಅನುಸರಿಸುವುದು ದುರಂತವಾಗಿದೆ. ಕೆಡುಕು ಮುಕ್ತವಾದ ಸಮಾಜದ ನಿರ್ಮಾಣಕ್ಕೆ ಮುಸ್ಲಿಮ್ ಸಮುದಾಯ ಕಟಿಬದ್ಧರಾಗಬೇಕಿದೆ. ಪ್ರವಾದಿ (ಸ) ಯ ಬೋಧನೆಗಳು ನಮ್ಮ ಕಣ್ಣು ತೆರೆಸಬೇಕು' ಎಂದು ಹೇಳಿದರು.
ಶಕೀಲ್ ಮಸೂದ್ ಕಿರಾಅತ್ ಪಠಿಸಿದರು. ಹುದೈಫ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುದ್ರೋಳಿ ಶಾಖಾದ್ಯಕ್ಷ ವಕಾಝ್ ಅರ್ಶಲನ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ವೇದಿಕೆಯಲ್ಲಿ ಅಭಿಯಾನ ಸಂಚಾಲಕ ಯು.ಕೆ.ಖಾಲಿದ್ ಮತ್ತು ಹಿರಿಯ ಸದಸ್ಯ ಅಬ್ದುರ್ರಶೀದ್ ಉಪಸ್ಥಿತರಿದ್ದರು.

Similar News