×
Ad

ನಂದಳಿಕೆ: ಸಾಲಬಾಧೆ; ಯುವಕ ಆತ್ಮಹತ್ಯೆ

Update: 2022-12-29 21:54 IST

ಕಾರ್ಕಳ: ಸಾಲಬಾಧೆಯಿಂದ ಬೇಸತ್ತ ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಮಾವಿನಕಟ್ಟೆಯಲ್ಲಿ ಡಿ.28ರಂದು ಸಂಜೆ 7:00 ಗಂಟೆಗೆ ನಡೆದಿದೆ.

ನಂದಳಿಕೆ ಮಾವಿನಕಟ್ಟೆ ನಿವಾಸಿ 34 ವರ್ಷದ ಹರೀಶ್ ನಾಯ್ಕ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಇವರು ಕೂಲಿ ಕೆಲಸ ಮಾಡುತ್ತಿದ್ದು, ತನ್ನ ತಂಗಿಯ ಮದುವೆಗಾಗಿ ಬೆಳ್ಮಣ್ನ ಸೊಸೈಟಿಯೊಂದರಲ್ಲಿ ಸಾಲ ತೆಗೆದಿದ್ದರು. ಅದನ್ನು ಸರಿಯಾಗಿ ಮರುಪಾವತಿಸಲಾಗದೆ ತೀವ್ರವಾಗಿ ಮನನೊಂದಿದ್ದರು. ಇದೇ ಕಾರಣದಿಂದ ಬೇಸತ್ತು ಡಿ.28ರಂದು ಮಧ್ಯಾಹ್ನ 3ಗಂಟೆಯಿಂದ 7ಗಂಟೆಯ ಮಧ್ಯಾವಧಿಯಲ್ಲಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮಾಡಿನ ಜಂತಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News