ಕೋಟತೊಟ್ಟು ನಿವಾಸಿ ಖತರ್ ನಲ್ಲಿ ನಿಧನ
Update: 2022-12-29 22:05 IST
ಕೋಟ: ಖತರ್ ನಲ್ಲಿ ಉದ್ಯೋಗಿಯಾಗಿದ್ದ ಕೋಟತಟ್ಟುಪಡುಕರೆ ನಿವಾಸಿ ಮುಹಮ್ಮದ್ (45) ಕುಸಿದು ಬಿದ್ದು ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಇಲ್ಲಿನ ಕೋಟತೊಟ್ಟು ಪಡುಕರೆ ನಿವಾಸಿಯಾಗಿದ್ದ ಮುಹಮ್ಮದ್ ತಾಯಿ, ಪತ್ನಿ, ನಾಲ್ಕು ಸಹೋದರ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಖತರ್ ನ ಸನಯ್ಯ ಎಂಬಲ್ಲಿ 14 ವರ್ಷಗಳಿಂದ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಲ್ಲಿದ್ದರು. ಜ. 2ರಂದು ಊರಿಗೆ ಬರಲು ಸಿದ್ಧತೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ನಾಲ್ಕು ದಿನಗಳ ಹಿಂದೆ ಕೆಲಸ ನಿರ್ವಹಿಸುತಿದ್ದಾಗ ಕುಸಿದು ಬಿದ್ದು, ಮೆದುಳು ನಿಷ್ಕ್ರಿಯೆಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾರೆ.
ಕೋಟತೊಟ್ಟು ಪಡುಕರೆ ಹಿದಾಯತುಲ್ ಇಸ್ಲಾಂ ಮದರಸ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅವರು, ಕೆಸಿಎಫ್ ಖತರ್ ರಾಷ್ಟ್ರೀಯ ಸಮಿತಿಯ ಅಝೀಝಿಯಾ ಝೋನ್ ಸನಯ್ಯಾ ಯುನಿಟ್ ಅಧ್ಯಕ್ಷರಾಗಿದ್ದರು.