ನಗರಾಡಳಿತ ಚುನಾವಣೆಯಲ್ಲಿ ಒಬಿಸಿ ಮೀಸಲಾತಿಗೆ ನಕಾರ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಉ.ಪ್ರ. ಸರಕಾರ

Update: 2022-12-29 17:19 GMT

ಹೊಸದಿಲ್ಲಿ,ಡಿ.29: ನಗರಾಡಳಿತ ಸಂಸ್ಥೆಗಳ ಚುನಾವಣೆಗಳಲ್ಲಿ ಓಬಿಸಿ ಮೀಸಲಾತಿಯನ್ನು ಕಲ್ಪಿಸುವ ತನ್ನ ಅಧಿಸೂಚನೆಯನ್ನು ತಳ್ಳಿಹಾಕಿದ ಅಲಹಾಬಾದ್ ಹೈಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರಕಾರವು ಗುರುವಾರ ಸುಪ್ರೀಂಕೋರ್ಟ್ ಮೆಟ್ಟಲೇರಿದೆ.

ನಗರಾಡಳಿತ ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಮಹಿಳೆಯರ ಜೊತೆ ಒಬಿಸಿ ಸಮುದಾಯಗಳಿಗೂ ಮೀಸಲಾತಿಯನ್ನು ಒದಗಿಸುವ ಉ.ಪ್ರ. ಸರಕಾರದ ಡಿಸೆಂಬರ್ 5ರ ಕರಡು ಅಧಿಸೂಚನೆಯನ್ನು ಅಧಿಸೂಚನೆಯನ್ನು ಅಲಹಾಬಾದ್ ಹೈಕೋರ್ಟ್ ಡಿ.27ರ ಆದೇಶದಲ್ಲಿ ತಳ್ಳಿಹಾಕಿತ್ತು.

ರಾಜ್ಯದ ಹಲವಾರು ನಗರಸಭೆಗಳ ಅವಧಿ ಜನವರಿ 31ರೊಳಗೆ ಮುಕ್ತಾಯಗೊಳ್ಳಲಿದ್ದು, ಒಬಿಸಿ ಮೀಸಲಾತಿಯಿಲ್ಲದೆ ತಕ್ಷಣವೇ ನಗರಾಡಳಿತ ಸಂಸ್ಥೆಗಳ ಚುನಾವಣೆಗೆ ಅಧಿಸೂಚನೆ ಹೊರಡಿಸಬೇಕೆಂದು ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠವು ರಾಜ್ಯ ಸರಕಾರಕ್ಕೆ ಸೂಚಿಸಿತ್ತು.

Similar News