ಫುಟ್ಬಾಲ್‌ ದಂತಕಥೆ ಪೀಲೆ ಕುರಿತ ಕೆಲವು ಕುತೂಹಲಕಾರಿ ಮಾಹಿತಿ ಇಲ್ಲಿದೆ

Update: 2022-12-30 09:53 GMT

ರಿಯೋ ಡಿ ಜನೈರೊ: ಕಡು ಬಡತನದಿಂದ ಆಧುನಿಕ ಇತಿಹಾಸದಲ್ಲಿ ಶ್ರೇಷ್ಠ ಹಾಗೂ ಪ್ರಸಿದ್ಧ ಕ್ರೀಡಾಪಟುಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ, ಜಗತ್ತನ್ನೇ ಮೋಡಿ ಮಾಡಿದ ‘ಕಪ್ಪು ಮುತ್ತು’  ಬ್ರೆಝಿಲ್ ಫುಟ್ಬಾಲ್ ಮಾಂತ್ರಿಕ ಪೀಲೆ ಗುರುವಾರ ತಡರಾತ್ರಿ ಸಾವೊ ಪೌಲೊದಲ್ಲಿ 82 ನೇ ವಯಸ್ಸಿನಲ್ಲಿ ನಿಧನರಾದರು.

ಫುಟ್ಬಾಲ್‌ ದಂತಕಥೆ ಪೀಲೆ ಕುರಿತು ಕೆಲವೊಂದು ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

►ಪೀಲೆ ಹುಟ್ಟಿದ್ದು ಬ್ರೆಝಿಲ್‌ನಲ್ಲಿ ಅಕ್ಟೋಬರ್‌ 23,  1940 ರಲ್ಲಿ. ಆಗ ಅವರ ಹೆಸರು ಎಡ್ಸನ್‌ ಅರಾಂಟೆಸ್‌ ಡೊ ನಾಸಿಮೆಂಟೊ ಎಂದಾಗಿತ್ತು.

►ಅವರು 15 ವರ್ಷದವರಿರುವಾಗಲೇ ಬ್ರೆಝಿಲ್‌ನ ತಂಡ ಸಾಂಟೋಸ್‌ ಸೇರಿದ್ದರು. ಸೆಪ್ಟೆಂಬರ್‌ 7, 1956 ರಲ್ಲಿ  ಎಫ್‌ಸಿ ಕೊರಿಂತಿಯಾನ್ಸ್‌ ವಿರುದ್ಧದ ತಮ್ಮ ಲೀಗ್‌ ಚೊಚ್ಚಲ ಪಂದ್ಯದಲ್ಲಿ ಅವರು ನಾಲ್ಕು ಗೋಲ್‌ ಬಾರಿಸಿದ್ದರು.

►ಪೀಲೆ ಒಟ್ಟು 1,283 ಫಸ್ಟ್‌ ಕ್ಲಾಸ್‌ ಗೋಲ್‌ ಬಾರಿಸಿದ್ದರು. ಇವುಗಳಲ್ಲಿ 77 ಗೋಲ್‌ಗಳನ್ನು ಬ್ರೆಝಿಲ್‌ ತಂಡದ ಪರ ಬಾರಿಸಿದ್ದರು.

►1999 ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಪೀಲೆ ಅವರನ್ನು ಶತಮಾನದ ಅಥ್ಲೀಟ್‌ ಎಂದು ಗುರುತಿಸಿತ್ತು.

►ನವೆಂಬರ್‌ 19, 1969 ರಲ್ಲಿ ಪೀಲೆ ತಮ್ಮ ವೃತ್ತಿ ಜೀವನದ 1000ನೇ ಗೋಲ್‌ ಬಾರಿಸಿದರು. ಆಗ ನೂರಾರು ಅಭಿಮಾನಿಗಳು ಮೈದಾನ ಪ್ರವೇಶಿಸಿ ಅವರನ್ನು ಸುತ್ತುವರಿದ ಕಾರಣ ಪಂದ್ಯ ಪುನರಾರಂಭಗೊಳ್ಳಲು ಅರ್ಧ ಗಂಟೆ ಬೇಕಾಯಿತು.

              (Photo: PTI/AP)

►ಬ್ರೆಝಿಲ್‌ನ ಸಾಂಟೋಸ್‌ನಲ್ಲಿ ನವೆಂಬರ್‌ 19 ರಂದು ಪೀಲೆ ದಿನವನ್ನಾಗಿ ಆಚರಿಸಿ ಪೀಲೆ ಅವರ 1000 ನೇ ಗೋಲ್‌ನ ವಾರ್ಷಿಕೋತ್ಸವ ನಡೆಸಲಾಗುತ್ತದೆ.

►1967 ರಲ್ಲಿ ಯುದ್ಧಪೀಡಿತ ನೈಜೀರಿಯಾಗೆ ಪೀಲೆ ಭೇಟಿ ನೀಡಿದ ಸಂದರ್ಭ ಅವರ ಆಟವನ್ನು ಫೆಡರಲ್‌ ಮತ್ತು ಬಂಡುಕೋರ ಪಡೆಗಳು ವೀಕ್ಷಿಸುವಂತಾಗಲು 48 ಗಂಟೆ ಕದನ ವಿರಾಮ ಘೋಷಿಸಲಾಗಿತ್ತು.

►ಬ್ರೆಝಿಲ್‌ನಲ್ಲಿ ಅವರನ್ನು ʻಪೆರೊಲ ನೆಗ್ರಾʼ ಅಂದರೆ ಕಪ್ಪು ಮುತ್ತು ಎಂದು ಬಣ್ಣಿಸಲಾಗುತ್ತದೆ.

►ಬ್ರೆಝಿಲ್‌ ಸರ್ಕಾರ ಪೀಲೆ ಅವರನ್ನು 1961 ರಲ್ಲಿ ಅಧಿಕೃತ ರಾಷ್ಟ್ರೀಯ ಸ್ವತ್ತು ಎಂದು ಘೋಷಿಸಿ ಅವರನ್ನು ಬೇರೆ ದೇಶಕ್ಕೆ ವರ್ಗಾಯಿಸುವುದನ್ನು ತಡೆದಿತ್ತು.

Similar News