ಮಂಗಳೂರು | ಎಐಟಿಯುಸಿ ರಾಷ್ಟ್ರೀಯ ಮಂಡಳಿಗೆ ವಿ.ಎಸ್.ಬೇರಿಂಜ ಆಯ್ಕೆ
Update: 2022-12-30 18:01 IST
ಮಂಗಳೂರು: ಸ್ವಾತಂತ್ರ್ಯಾಪೂರ್ವದಲ್ಲಿ (1920) ಸಂಘಟಿತಗೊಂಡ ದೇಶದ ಪ್ರಪ್ರಥಮ ಕಾರ್ಮಿಕ ಸಂಘಟನೆಯಾದ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ)ನ ರಾಷ್ಟ್ರೀಯ ಮಂಡಳಿಗೆ ಎಐಟಿಯುಸಿ ಕರ್ನಾಟಕ ರಾಜ್ಯ ಉಪಾಧ್ಯಕ್ಷ, ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಳೂರಿನ ವಿ.ಎಸ್. ಬೇರಿಂಜ ಆಯ್ಕೆಯಾಗಿದ್ದಾರೆ.
2022 ಡಿಸೆಂಬರ್ 16ರಿಂದ 20ರವರೆಗೆ ಕೇರಳದ ಅಳಪುಝದಲ್ಲಿ ಜರಗಿದ ಎಐಟಿಯುಸಿಯ 42ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ವಿ.ಎಸ್. ಬೇರಿಂಜ ಅವರನ್ನು ರಾಷ್ಟ್ರೀಯ ಮಂಡಳಿಗೆ ಆಯ್ಕೆ ಮಾಡಲಾುತು ಎಂದು ಎಐಟಿಯುಸಿ ದ.ಕ ಮತ್ತು ಉಡುಪಿ ಜಿಲ್ಲಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.