×
Ad

ತೊಕ್ಕೊಟ್ಟು: ಹಿರಾ ಪದವಿ ಕಾಲೇಜಿನ ವಾರ್ಷಿಕ ಕ್ರೀಡಾಕೂಟ

Update: 2022-12-31 10:06 IST

ಉಳ್ಳಾಲ, ಡಿ.31: ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಅಗತ್ಯ. ಜಾತಿ ಭೇಧವಿಲ್ಲದೆ ಒಟ್ಟಾಗಿ ಶಿಕ್ಷಣ ಪಡೆದು ಎಲ್ಲಾ ಸಂಸ್ಕೃತಿಗೆ ಗೌರವ ಕೊಡುವ ಮನೋಭಾವ  ಬೆಳೆಸಿಕೊಳ್ಳಬೇಕು ಎಂದು ದ‌.ಕ. ಜಿಲ್ಲಾ  ಫುಟ್ಬಾಲ್  ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ.ಅಸ್ಲಂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅವರು ತೊಕ್ಕೊಟ್ಟುವಿನ ಹಿರಾ ಮಹಿಳಾ ಸಂಯುಕ್ತ ಪದವಿ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಶಾಂತಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಎ.ಎಚ್.ಮೆಹಮೂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಾಂತಿ ಎಜುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಅಬ್ದುಲ್ ಕರೀಂ, ಸಂಚಾಲಕ ರಹ್ಮತುಲ್ಲಾ, ಪ್ರಾಂಶುಪಾಲೆ ಫಾತಿಮಾ ಮೆಹರೂಂ, ಆಡಳಿತಾಧಿಕಾರಿ ಝಾಕಿರ್ ಹುಸೈನ್, ಪಿಟಿಎ ಅಧ್ಯಕ್ಷೆ ಶಂಶಾದ್ ಹಾಗೂ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.

ಹಿಬಾ ಸತ್ತಾರ್ ಪ್ರಾರ್ಥಿಸಿದರು. ಮುಫೀದಾ ವಂದಿಸಿದರು. ಅನುರಾ ಮುಜಾಹಿದ್ ಸ್ವಾಗತಿಸಿದರು. ತಸ್ಕೀನ್ ಸಲಾಂ ಕಾರ್ಯಕ್ರಮ ನಿರೂಪಿಸಿದರು.

Similar News