×
Ad

ಮಂಗಳೂರು: ವಿಕಲಚೇತನ, ಹಿರಿಯ ನಾಗರಿಕರ ಸಬಲೀಕರಣಕ್ಕೆ ಅರ್ಜಿ ಆಹ್ವಾನ

Update: 2022-12-31 17:53 IST

ಮಂಗಳೂರು: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಕೇಂದ್ರ ಸರಕಾರದಿಂದ 2022ನೇ ಸಾಲಿಗೆ ನ್ಯಾಷನಲ್ ಇ-ಸ್ಕಾಲರ್‌ಶಿಪ್ ಯೋಜನೆಯಡಿ ಪ್ರಿ ಮೆಟ್ರಿಕ್ ಹಾಗೂ ಟಾಪ್‌ಕ್ಲಾಸ್ ವಿಕಲಚೇತನ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ವಿಕಲಚೇತನ ವಿದ್ಯಾರ್ಥಿಗಳು ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆಗಳ ಮೂಲಕ ವೆಬ್‌ಸೈಟ್: https://ssp.prematric.karnataka.gov.in ನಲ್ಲಿ ಆಯಾ ತಾಲೂಕಿನ  ವಿಆರ್‌ಡಬ್ಲ್ಯು, ಎಂಆರ್‌ಡಬ್ಲ್ಯು ಹಾಗೂ ಯುಆರ್‌ಡಬ್ಲ್ಯುಗಳ ಮೂಲಕ ನೇರವಾಗಿ ಅಥವಾ ಸ್ವತಃ ತಾವೇ ನೇರವಾಗಿ ಕಚೇರಿಗೆ 2023ರ  ಜನವರಿ 15 ರೊಳಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಮಂಗಳೂರು ತಾಲೂಕಿನ ಜಯಪ್ರಕಾಶ್ ಮೊ.ಸಂ: 9110897458, ಬಂಟ್ವಾಳ ತಾಲೂಕಿನ ಗೀರೀಶ್ ಮೊ.ಸಂ: 9164645616, ಪುತ್ತೂರು ತಾಲೂಕಿನ ನವೀನ್ ಮೊ.ಸಂಖ್ಯೆ: 9686682251, ಸುಳ್ಯ ತಾಲೂಕಿನಚಂದ್ರಶೇಖರ ಮೊ.ಸಂಖ್ಯೆ: 815300057, ಕಡಬ ತಾಲೂಕಿನ ಅಕ್ಷತಾ ಮೊ.ಸಂ: 7899579773, ಬೆಳ್ತಂಗಡಿ ತಾಲೂಕಿನ ಜಾನ್ ಮೊ.ಸಂ: 7975199473 ಹಾಗೂ 0824-2455999 ಮೂಲಕ ಆಯಾ ತಾಲೂಕಿನ ಎಂಆರ್‌ಡಬ್ಲ್ಯುಗಳು ಅಥವಾ ಇಲಾಖೆಯ ವೆಬ್‌ಸೈಟ್: www.disabilityaffairs.gov.in ನಲ್ಲಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News