ಮಂಗಳೂರು: ಫೆ.28ರವರೆಗೆ ವಿಕಲಚೇತನರ ಬಸ್ ಪಾಸ್ ಮಾನ್ಯ
ಮಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಿಂದ 2022ನೇ ಸಾಲಿಗೆ ವಿತರಿಸಿರುವ ವಿಕಲಚೇತನರ ಬಸ್ ಪಾಸ್‌ಗಳನ್ನು 2023ರ ಫೆಬ್ರವರಿ 28ರವರೆಗೆ ಮಾನ್ಯ ಮಾಡಲಾಗಿದೆ.
ಪ್ರಸಕ್ತ ಸಾಲಿನಲ್ಲಿ ವಿಕಲಚೇತನರ ಪಾಸ್ ನವೀಕರಣ ಹಾಗೂ ಹೊಸ ಪಾಸ್ ಪಡೆಯುವ ಫಲಾನುಭವಿಗಳು ಸೇವಾಸಿಂಧು ಪೋರ್ಟಲ್ https://serviceonline.gov.in/karnataka ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.
ಸೇವಾಸಿಂಧುನಲ್ಲಿ ಅರ್ಜಿ ಸಲ್ಲಿಸುವಾಗ ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಪ್ರತಿ, ಪಾಸ್‌ಪೋರ್ಟ್ ಸೈಜ್ ಫೋಟೋ ಹಾಗೂ ಯುಡಿಐಡಿ, ಗುರುತಿನ ಚೀಟಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ ಆಯಾ ತಾಲೂಕಿನ ಘಟಕದಲ್ಲಿ ಪಾಸ್‌ಗಳನ್ನು ಪಡೆಯಬೇಕು.
ಹೊಸದಾಗಿ ಪಾಸ್ ಪಡೆಯುವವರು ಸಲ್ಲಿಸಿರುವ ಅರ್ಜಿಯ ಪ್ರತಿ, ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಪ್ರತಿ, ಪಾಸ್‌ಪೋರ್ಟ್ ಸೈಜ್ ಫೋಟೋ 2, ಅಂಚೆಚೀಟಿ ಗಾತ್ರದ ಪೋಟೋ 1 ಹಾಗೂ ಯುಡಿಐಡಿ, ಗುರುತಿನಚೀಟಿ ಹಾಗೂ 660 ರೂ. ಪಾವತಿಸಿ ಪುತ್ತೂರಿನ ವಿಭಾಗೀಯ ಕಚೇರಿಯಿಂದ ಪಾಸ್ ಪಡೆಯುವಂತೆ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.