×
Ad

ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದ 1933 ರ ಲಗ್ನ ಪತ್ರಿಕೆ.!

Update: 2022-12-31 22:59 IST

ಹೊಸದಿಲ್ಲಿ: ಉರ್ದುವಿನಲ್ಲಿ ಬರೆದಿರುವ 1933ರ ಲಗ್ನ ಪತ್ರಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ.

ಸೋನ್ಯಾ ಬಾತ್ಲಾ ಎಂಬ ಟ್ವಿಟರ್‌ ಬಳಕೆದಾರರೊಬ್ಬರು, ಈ ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚಿಕೊಂಡಿದ್ದು, ಸರಿ ಸುಮಾರು 9 ದಶಕಗಳ ಹಿಂದಿನ ವಿವಾಹ ಪತ್ರಿಕೆಯು ನೆಟ್ಟಿಗರ ಗಮನ ಸೆಳೆದಿದೆ.

 ಉರ್ದುವಿನಲ್ಲಿ ಬರೆದಿರುವ ಈ ಲಗ್ನ ಪತ್ರಿಕೆಯಲ್ಲಿ, ಮದುವೆ ದಿನಾಂಕ: 23, ಏಪ್ರಿಲ್‌, 1933ರಂದು ನಡೆಯಲಿದ್ದು ವಧು ವರರಿಗೆ ಶುಭಕೋರುವಂತೆ ಕುಟುಂಬದವರು ಮನವಿ ಮಾಡಿದ್ದಾರೆ. ವಿವಾಹ ನಡೆಯುವ ಸ್ಥಳ, ವಧು ವರರ ಹೆಸರು ಹಾಗೂ ಕುಟುಂಬದವರ ಹೆಸರನ್ನು ನಮೂದಿಸಲಾಗಿದೆ.

PC: SonyaBattla2/twitter

"ಸ್ಟ್ರೀಟ್ ಖಾಸಿಮ್ ಜಾನ್‌ನಲ್ಲಿರುವ ನನ್ನ ಮನೆಗೆ ಬರಲು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ, ತದನಂತರ ಕಿಶನ್ ಗಂಜ್ ಪ್ರದೇಶದಲ್ಲಿರುವ ವಧುವಿನ ಮನೆಗೆ ನಿಕ್ಕಾಹ್ (ಪ್ರವಾದಿ ಮುಹಮ್ಮದ್ ಅವರ ಸುನ್ನತ್) ನ ಭಾಗವಾಗಲು ಮತ್ತು ಭೋಜನ ಸವಿಯಲು ನಮ್ಮೊಂದಿಗೆ ಬನ್ನಿ. ವಲೀಮಾ 1933 ಏಪ್ರಿಲ್ 24 ರಂದು / ಝುಲ್-ಹಜ್ 28 ,1351 ರಂದು ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ನನ್ನ ಮನೆಗೆ ಬಂದು ವಲೀಮಾದಲ್ಲಿ ಪಾಲ್ಗೊಳ್ಳಿ"  ಎಂದು ಕರೆಯೋಲೆಯಲ್ಲಿ ಮನವಿ ಮಾಡಲಾಗಿದೆ.

 ಸೋನ್ಯಾ ಬಾತ್ಲಾ ಅವರು ಈ ಲಗ್ನ ಪತ್ರಿಕೆಯನ್ನು ಟ್ವೀಟ್‌ ಮಾಡಿ, ಇದು ನಮ್ಮ ಅಜ್ಜ–ಅಜ್ಜಿ ಮದುವೆಯ ಆಮಂತ್ರಣ ಪತ್ರಿಕೆ ಎಂದು ಬರೆದುಕೊಂಡಿದ್ದಾರೆ.

Similar News