×
Ad

ರೈಲ್ವೆ ಜಮೀನಿನಲ್ಲಿರುವ ಮನೆಗಳ ತೆರವಿಗೆ ಹೈಕೋರ್ಟ್ ಆದೇಶ: ನಿರಾಶ್ರಿತರಾಗಲಿರುವ ಮುಸ್ಲಿಂ ಬಾಹುಳ್ಯದ 4,300 ಕುಟುಂಬಗಳು

Update: 2022-12-31 23:28 IST

ಡೆಹ್ರಾಡೂನ್: ಮುಸ್ಲಿಂ ಬಾಹುಳ್ಯದ ಗಫೂರ್ ಬಸ್ತಿ ಎಂಬಲ್ಲಿ ಹಲ್ದ್ವಾನಿ ರೈಲ್ವೆ ನಿಲ್ದಾಣದ ಪಕ್ಕದ ರೈಲ್ವೆ ಭೂಮಿಯ "ಅನಧಿಕೃತ ನಿವಾಸಿಗಳನ್ನು" ತೆರವುಗೊಳಿಸುವಂತೆ ಉತ್ತರಾಖಂಡ್ ಹೈಕೋರ್ಟ್‌ನ ಆದೇಶದ ವಿರುದ್ಧ ಉತ್ತರಾಖಂಡ್‌ನಲ್ಲಿ ನೂರಾರು ಮುಸ್ಲಿಂ ಕುಟುಂಬಗಳು ಪ್ರತಿಭಟನೆ ನಡೆಸುತ್ತಿವೆ ಎಂದು maktoobmedia.com ವರದಿ ಮಾಡಿದೆ.

ಉತ್ತರಾಖಂಡ ಹೈಕೋರ್ಟ್ ಕಳೆದ ವಾರ ಹಲ್ದ್ವಾನಿಯ ಬನ್‌ಭೂಲ್‌ಪುರದಲ್ಲಿ ಅತಿಕ್ರಮಣಗೊಂಡಿರುವ ರೈಲ್ವೇ ಭೂಮಿ ಮೇಲಿನ ನಿರ್ಮಾಣಗಳನ್ನು ಕೆಡವಲು ಆದೇಶ ನೀಡಿತ್ತು. ನ್ಯಾಯಾಧೀಶರಾದ ಶರದ್ ಶರ್ಮಾ ಮತ್ತು ಆರ್‌ಸಿ ಖುಲ್ಬೆ ಅವರನ್ನೊಳಗೊಂಡ ವಿಭಾಗೀಯ ಪೀಠ ಅಲ್ಲಿನ ನಿವಾಸಿಗಳಿಗೆ ಒಂದು ವಾರದ ನೋಟಿಸ್ ನೀಡಿ ನಂತರ ನಿರ್ಮಾಣಗಳನ್ನು ನೆಲಸಮಗೊಳಿಸಬೇಕು ಎಂದು ಸಂಬಂಧಪಟ್ಟ ಇಲಾಖೆಗೆ ನಿರ್ದೇಶಿಸಿತ್ತು. 

ಬಂಭೂಲ್ಪುರದಲ್ಲಿ 29 ಎಕರೆ ರೈಲ್ವೆ ಭೂಮಿಯಲ್ಲಿ ಹರಡಿರುವ ಪ್ರದೇಶದಲ್ಲಿ ಮಸೀದಿಗಳು, ಶಾಲೆಗಳು, ವ್ಯಾಪಾರ ಸಂಸ್ಥೆಗಳು ಮತ್ತು ನಿವಾಸಗಳಿವೆ. ಹೈಕೋರ್ಟ್‌ನ ಈ ಆದೇಶವು ಬಹುತೇಕ ಮುಸ್ಲಿಮರಾಗಿರುವ  4,300 ಕುಟುಂಬಗಳ ಮೇಲೆ ಪರಿಣಾಮ ಬೀರಲಿದೆ ಎಂದು maktoobmedia.com ವರದಿ ಮಾಡಿದೆ.

ಈ ಮಧ್ಯೆ ಮುಸ್ಲಿಂ ಸಂಘಟನೆಗಳು ಒಕ್ಕಲೆಬ್ಬಿಸುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ. ಪ್ರತಿಭಟನಾ  ಸ್ಥಳಕ್ಕೆ ಆಗಮಿಸಿದ ಜಮೀಯತ್ ಉಲಮಾ-ಎ-ಹಿಂದ್ ಮುಖಂಡರು ಕುಟುಂಬಗಳಿಗೆ ಬೆಂಬಲ ಸೂಚಿಸಿದ್ದಾರೆ.

ಉತ್ತರಾಖಂಡದ ಆಲ್ ಇಂಡಿಯಾ ಮಜ್ಲಿಸ್-ಎ-ಇತಿಹಾದ್ ಉಲ್ ಮುಸ್ಲಿಮೀನ್ (ಎಐಎಂಐಎಂ) ನ ರಾಜ್ಯಾಧ್ಯಕ್ಷ ಡಾ. ನಯ್ಯರ್ ಕಜ್ಮಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಬರೆದ ಪತ್ರದಲ್ಲಿ, ಏಳು ದಶಕಗಳಿಗೂ ಹೆಚ್ಚು ಕಾಲ 4,500 ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸಿಸುತ್ತಿವೆ ಮತ್ತು ಅವರು ವಿದ್ಯುತ್ ಸಂಪರ್ಕಗಳು, ಮನೆ ತೆರಿಗೆಗಳು, ಜಲ ಸಂಸ್ಥಾನ ಸಂಪರ್ಕಗಳು ಮತ್ತು ಇತರ ವಸತಿ ಸೌಕರ್ಯವನ್ನು ಹೊಂದಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನು ಭೇಟಿಯಾದ ಕ್ರಿಕೆಟರ್ ಹಾರ್ದಿಕ್‌ ಪಾಂಡ್ಯ 

Similar News