×
Ad

ನೋಟು ಅಮಾನ್ಯೀಕರಣ ತೀರ್ಪಿನ ಮುಖ್ಯಾಂಶಗಳು: ಸುಪ್ರೀಂಕೋರ್ಟ್‌ ಹೇಳಿದ್ದೇನು?

Update: 2023-01-02 12:14 IST

ಹೊಸದಿಲ್ಲಿ: ಕೇಂದ್ರ ಸರ್ಕಾರ 2016 ರಲ್ಲಿ ಜಾರಿಗೊಳಿಸಿದ ರೂ. 1000 ಹಾಗೂ ರೂ. 500 ಕರೆನ್ಸಿ ನೋಟುಗಳ ಅಮಾನ್ಯೀಕರಣವನ್ನು ಸುಪ್ರೀಂ ಕೋರ್ಟಿನ ಪಂಚ ಸದಸ್ಯರ ಪೀಠ ಎತ್ತಿ ಹಿಡಿದಿದೆ. ಆದರೆ ಪೀಠದ ಭಾಗವಾಗಿದ್ದ ಜಸ್ಟಿಸ್‌ ಬಿ ವಿ ನಾಗರತ್ನ ಮಾತ್ರ  ಇದಕ್ಕೆ ಅಸಮ್ಮತಿ ಸೂಚಿಸಿದ್ದಾರೆ. ಆದರೆ ಪೀಠದ ಇತರ ನಾಲ್ಕು ಸದಸ್ಯರು ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿದಿದ್ದಾರೆ.

ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದ ಪ್ರಮುಖ ಅಂಶಗಳು ಇಂತಿವೆ.

►RBI ಕಾಯಿದೆಯ ಸೆಕ್ಷನ್‌ 26 ನಲ್ಲಿ ಉಲ್ಲೇಖಿಸಲಾದ ʼಯಾವುದೇʼ ಪದಕ್ಕೆ ನಿರ್ಬಂಧಿತ ಎಂಬ ಅರ್ಥ ನೀಡಲಾಗದು.(ಆರ್‌ಬಿಐ ಕಾಯಿದೆಯ ಸೆಕ್ಷನ್‌ 26 ʻಎಲ್ಲಾʼ ಎಂದು ಹೇಳುವುದಿಲ್ಲ ಬದಲು ʼಯಾವುದೇʼ ಎಂದು ಹೇಳುವುದರಿಂದ ಒಂದು ಮುಖಬೆಲೆಯ ನೋಟಿನ ಎಲ್ಲಾ ಸೀರೀಸ್‌ ಅನ್ನು ಅಮಾನ್ಯೀಕರಣಗೊಳಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು).

►ಅಮಾನ್ಯೀಕರಣ ಪ್ರಸ್ತಾಪವನ್ನು ಕೇಂದ್ರ ಮಾಡಿದ ಏಕೈಕ ಕಾರಣಕ್ಕೆ ನಿರ್ಧಾರ ಕೈಗೊಳ್ಳುವಿಕೆ ಪ್ರಕ್ರಿಯೆ ತಪ್ಪು ಎಂದು ಹೇಳಲು ಸಾಧ್ಯವಿಲ್ಲ.

►ಈ ಕ್ರಮದಿಂದ ಸಾಧಿಸಬೇಕಾಗಿದ್ದ ಉದ್ದೇಶಗಳಿಗೂ ಈ ಕ್ರಮಕ್ಕೂ ಸಾಕಷ್ಟು ನಂಟು ಇದೆ.

►ಪ್ರಮಾಣಾನುಗುಣತೆಯ ಆಧಾರದಲ್ಲಿ ಅಮಾನ್ಯೀಕರಣ ಕ್ರಮವನ್ನು ರದ್ದುಗೊಳಿಸಲು ಸಾಧ್ಯವಿಲ್ಲ.

►ನೋಟುಗಳ ವಿನಿಮಯಕ್ಕೆ ನಿಗದಿಗೊಳಿಸಲಾಗಿದ್ದ 52 ದಿನಗಳನ್ನು ಅಸಮಂಜಸ ಎಂದು ಹೇಳಲು ಸಾಧ್ಯವಿಲ್ಲ.

►"ನೋಟು ರದ್ದತಿಗೆ ಸಂಬಂಧಿಸಿದ ಸಮಸ್ಯೆಗಳು ರಿಸರ್ವ್‌ ಬ್ಯಾಂಕ್ ಇವುಗಳನ್ನು ಅವಲೋಕಿಸಿದೆಯೇ ಎಂದು ಆಶ್ಚರ್ಯಪಡುವಂತೆ ಮಾಡುತ್ತದೆ" ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.

Similar News