×
Ad

ನಾಸಿಕ್‌ನ ರಾಸಾಯನಿಕ ಕಾರ್ಖಾನೆಯಲ್ಲಿ ಇನ್ನೂ ಆರದ ಬೆಂಕಿ

Update: 2023-01-02 23:06 IST

ನಾಸಿಕ್, ಜ. 2: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಎರಡು ಜೀವಗಳನ್ನು ಬಲಿ ತೆಗೆದುಕೊಂಡ 24 ಗಂಟೆಗಳ ಬಳಿಕವೂ ಬೆಂಕಿಯನ್ನು ನಂದಿಸುವ ಪ್ರಯತ್ನಗಳು ಮುಂದುವರಿದಿವೆ ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಅಗ್ನಿಶಾಮಕ ದಳದ 10 ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಬೆಂಕಿ ಶಮನವಾಗಲು ಇನಷ್ಟು ಸಮಯ ಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ. 

ಇಗಾತ್‌ಪುರಿ ತಾಲೂಕಿನ ನಾಸಿಕ್-ಮುಂಬೈ ರಾಷ್ಟ್ರೀಯ ಹೆದ್ದಾರಿಯ ಮುಂಧೆಗಾಂವನಲ್ಲಿರುವ ಜಿಂದಾಲ್ ಪಾಲಿ ಪಿಲ್ಮ್ಸ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಖಾನೆಯ ಬಾಯ್ಲರ್‌ನಲ್ಲಿ ರವಿವಾರ ಮುಂಜಾನೆ ಸ್ಫೋಟ ಸಂಭವಿಸಿದ ಬಳಿಕ ಬೆಂಕಿ ಹತ್ತಿಕೊಂಡಿತ್ತು. ರವಿವಾರ ಸುಮಾರು ಬೆಳಗ್ಗೆ ಸುಮಾರು 11.20ಕ್ಕೆ ನಡೆದ ಈ ಘಟನೆಯಲ್ಲಿ ಇಬ್ಬರು   ಸಾವನ್ನಪ್ಪಿದ್ದರು ಹಾಗೂ 17 ಮಂದಿ ಗಾಯಗೊಂಡಿದ್ದರು. ಸ್ಫೋಟ  ಸಮೀಪದ ಗ್ರಾಮಕ್ಕೆ ಕೇಳುವಷ್ಟು ಶಕ್ತಿಶಾಲಿಯಾಗಿತ್ತು. ತುಂಬಾ ದೂರದಿಂದ  ಬೆಂಕಿ ಹಾಗೂ ಹೊಗೆ ಕಂಡು ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Similar News