ಮಂಗಳೂರು: ಮತದಾನ ನೋಂದಣಿ ಕಾರ್ಯಾಗಾರ
Update: 2023-01-04 18:56 IST
ಮಂಗಳೂರು: ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್-ಇದರ ವತಿಯಿಂದ ಮಂಗಳವಾರ ಶಿವರಾಮ ಕಾರಂತ ಭವನದಲ್ಲಿ ಮತದಾನ ನೋಂದಣಿ ಕುರಿತು ಸಂವಾದ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಕೋಡಿಯಾಲ್‌ಬೈಲ್‌ನ ಗ್ರಾಮ ಆಡಳಿತಾಧಿಕಾರಿ ಪ್ರದೀಪ್ ಶೆಣೈ ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಸುಭಾಷಿಣಿ ಶ್ರೀವತ್ಸ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕಿ ಪವಿತ್ರಾ ಸ್ವಾಗತಿಸಿ, ವಿದ್ಯಾರ್ಥಿಗಳಾದ ಸೌಮ್ಯಾ ಕಾರ್ಯಕ್ರಮ ಸಂಯೋಜಿಸಿದರು.ಗಣೇಶ್ ಪ್ರಾರ್ಥನೆಗೈದು, ಅರ್ಜುನ್ ವಂದಿಸಿದರು.