×
Ad

ಉಡುಪಿ: ವಿದ್ಯಾರ್ಥಿ ನಿಲಯಗಳಲ್ಲಿ ಸ್ವಯಂರಕ್ಷಣಾ ತರಬೇತಿ; ಮಹಿಳಾ ತರಬೇತುದಾರರಿಂದ ಅರ್ಜಿ ಆಹ್ವಾನ

Update: 2023-01-04 19:25 IST
Editor : Ashwani

ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆಸಲಾಗುತ್ತಿರುವ ಜಿಲ್ಲೆಯ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಪಡೆದಿರುವ ಬಾಲಕಿಯರಿಗೆ ಕರಾಟೆ, ಜೂಡೋ, ಟಿಕ್ವೆಂಡೋ ಇತ್ಯಾದಿ ಸ್ವಯಂರಕ್ಷಣಾ ಕೌಶಲ್ಯಗಳ 6 ತಿಂಗಳ ಅವಧಿಯ ತರಬೇತಿ ನೀಡಲು ಅಂತಾರಾಷ್ಟ್ರೀಯ ಮನ್ನಣೆ ಹೊಂದಿದ ಮಾರ್ಷಲ್ ಆರ್ಟ್ಸ್‌ಗಳಲ್ಲಿ ಕನಿಷ್ಠ ಬ್ಲಾಕ್‌ಬೆಲ್ಟ್ ಪೂರ್ಣಗೊಳಿಸಿರುವ ನುರಿತ ಮಹಿಳಾ ತರಬೇತುದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಅರ್ಜಿ ಸಲ್ಲಿಸಲು ಜನವರಿ 16 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಸಮಾಜಕಲ್ಯಾಣ ಇಲಾಖೆ, ರಜತಾದ್ರಿ, ಮಣಿಪಾಲ ದೂ.ಸಂಖ್ಯೆ: 0820-2574892 ಅಥವಾ ಇ-ಮೇಲ್ ddswudp@gmail.com ಅನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - Ashwani

contributor

Editor - Ashwani

contributor

Similar News