ಆರ್ಥಿಕ ಬಿಕ್ಕಟ್ಟು ಹಿನ್ನೆಲೆ: 18 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಅಮೆಝಾನ್

Update: 2023-01-05 08:58 GMT

ವಾಷಿಂಗ್ಟನ್: 18 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಾಗಿ ಇ-ಕಾಮರ್ಸ್  ದೈತ್ಯ ಅಮೆಝಾನ್ Amazon ಕಂಪನಿ ಗುರುವಾರ ತಿಳಿಸಿದೆ.

2022ರ ನವೆಂಬರ್ ನಲ್ಲಿ 10,000 ಉದ್ಯೋಗಿಗಳನ್ನು ಅಷ್ಟೇ ತೆಗೆಯಲಾಗುತ್ತದೆ ಎಂದು ಕಂಪನಿ ಹೇಳಿತ್ತು. ಆದರೀಗ ಹಿಂದೆ ತಿಳಿಸಿದ್ದಕ್ಕಿಂತ ಹೆಚ್ಚು ನೌಕರರನ್ನು ವಜಾಗೊಳಿಸಲು ಚಿಂತನೆ ನಡೆಸಿದೆ.

ಕಂಪನಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಉದ್ಯೋಗ ಕಡಿತಕ್ಕೆ ರಿಟೇಲ್ ಮಾರಾಟ, ಮಾನವ ಸಂಪನ್ಮೂಲ ಹಾಗೂ ಉಪಕರಣಗಳ ವಿಭಾಗವನ್ನು ಕೇಂದ್ರೀಕರಿಸಲಿದೆ ಎಂದು ಅಮೆಝಾನ್ ಸಿಇಒ ಆ್ಯಂಡಿ ಜೆಸ್ಸಿ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ.

"ನಾವು ಬಾಧಿತರನ್ನು ಬೆಂಬಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ಪ್ರತ್ಯೇಕ ಪಾವತಿ, ಆರೋಗ್ಯ ವಿಮಾ ಪ್ರಯೋಜನಗಳು ಹಾಗೂ  ಬಾಹ್ಯ ಉದ್ಯೋಗ ನಿಯೋಜನೆ ಬೆಂಬಲವನ್ನು ಒಳಗೊಂಡಿರುವ ಪ್ಯಾಕೇಜ್‌ಗಳನ್ನು ಒದಗಿಸುತ್ತಿದ್ದೇವೆ" ಎಂದು ಆ್ಯಂಡಿ ಜೆಸ್ಸಿ ಹೇಳಿದರು.

ಎಚ್ ಪಿ, ಮೆಟಾ ಹಾಗೂ ಟ್ವಿಟರ್ ನಂತಹ ಕಂಪನಿಗಳು ಕೂಡ ವೆಚ್ಚ ಕಡಿತದ ಮೊರೆ ಹೋಗಿವೆ.

Similar News