ನಾಟೆಕಲ್ :ಪುಂಡರೀಕ ಅವರಿಗೆ ಬೀಳ್ಕೊಡುಗೆ ಸಮಾರಂಭ

Update: 2023-01-05 12:32 GMT

ಕೊಣಾಜೆ: ಕಂದಾಯ ಇಲಾಖೆಯಲ್ಲಿ 36 ವರ್ಷ 8 ತಿಂಗಳು ಸೇವೆ ಸಲ್ಲಿಸಿ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಡಿ ದರ್ಜೆ ನೌಕರರಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತಿ ಹೊಂದಿದ  ಪುಂಡರೀಕ ಸಿ ಹೆಚ್  ರವರಿಗೆ  ಕಂದಾಯ ಇಲಾಖೆಯ ವತಿಯಿಂದ  ಬೀಳ್ಕೊಡುಗೆ ಸಮಾರಂಭ ಗುರುವಾರ ನಾಟೆಕಲ್ ತಹಶಿಲ್ದಾರರ ಕಚೇರಿಯಲ್ಲಿ  ನಡೆಯಿತು.

ಈ ಸಂದರ್ಭದಲ್ಲಿ  ತಹಶೀಲ್ದಾರರಾದ ಡಿ ಎ ಪುಟ್ಟರಾಜು, ಉಪತಹಶೀಲ್ದಾರರಾದ ನವನೀತ್ ಮಾಳವ, ಕಂದಾಯ ನಿರೀಕ್ಷಕರಾದ ಮಂಜುನಾಥ್ ಕೆ ಹೆಚ್ ರವರು ವೇದಿಕೆಯಲ್ಲಿದ್ದರು.

ಆಹಾರ ನಿರೀಕ್ಷಕರಾದ ಪ್ರಮೋದ್ ಕುಮಾರ್, ಪ್ರಥಮ ದರ್ಜೆ ಸಹಾಯಕರಾದ ಮಲ್ಲೇಶ್, ಸಂತೋಷ್, ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು ಮತ್ತು ತಾಲೂಕು ಕಚೇರಿ ಸಿಬ್ಬಂದಿಗಳು ಹಾಜರಿದ್ದರು.

ಪ್ರಥಮ ದರ್ಜೆ ಸಹಾಯಕರಾದ ಕಿರಣ್ ಕುಮಾರ್ ರವರು ಸ್ವಾಗತಿಸಿ, ಗ್ರಾಮ ಆಡಳಿತ ಅಧಿಕಾರಿಯವರಾದ ನವ್ಯ ಎಸ್ ಎನ್ ರಾವ್ ರವರು ನಿರೂಪಿಸಿದರು. ಸಂತೋಷ್ ರವರು ವಂದಿಸಿದರು. 

Similar News