ಕಾಶ್ಮೀರ ಸಂಜಾತ ಇಜಾಝ್ ಅಹ್ಮದ್ನನ್ನು ಉಗ್ರ ಎಂದು ಘೋಷಿಸಿದ ಗೃಹಸಚಿವಾಲಯ
Update: 2023-01-05 23:12 IST
ಹೊಸದಿಲ್ಲಿ, ಜ. 5: ಕಾಶ್ಮೀರ-ಸಂಜಾತ ಇಜಾಝ್ ಅಹ್ಮದ್ ಅಹಂಗರ್ನನ್ನು ಕಾನೂನುಬಾಹಿರಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯ ವಿಧಿಗಳಡಿ ಭಯೋತ್ಪಾದಕ ಎಂಬುದಾಗಿಕೇಂದ್ರಗೃಹಸಚಿವಾಲಯಬುಧವಾರಘೋಷಿಸಿದೆ.
ಅಬು ಉಸ್ಮಾನ್ ಅಲ್-ಕಾಶ್ಮೀರಿ ಎಂಬುದಾಗಿಯೂ ಕರೆಯಲ್ಪಡುವ ಅಹಂಗರ್ ಈಗ ಅಫ್ಘಾನಿಸ್ತಾನದಲ್ಲಿದ್ದಾನೆ. ಅವನುಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ಜಮ್ಮು ಮತ್ತು ಕಾಶ್ಮೀರ ಶಾಖೆಯಮುಖ್ಯಆಯ್ಕೆಗಾರರ ಪೈಕಿ ಒಬ್ಬನಾಗಿದ್ದಾನೆ ಎಂದುಸಚಿವಾಲಯವುಅಧಿಸೂಚನೆಯಲ್ಲಿ ತಿಳಿಸಿದೆ.
ಕಾಶ್ಮೀರದಲ್ಲಿ ಭಯೋತ್ಪಾದನೆಗೆ ವೇಗ ನೀಡಲುಅಹಂಗರ್ ಕೆಲಸಮಾಡುತ್ತಿದ್ದಾನೆ ಹಾಗೂತನ್ನ ಭಯೋತ್ಪಾದನಾ ಜಾಲಕ್ಕೆಸೇರಿಸಿಕೊಳ್ಳಲು ಕಾಶ್ಮೀರದ ನಿವಾಸಿಗಳ ಹುಡುಕಾಟದಲ್ಲಿದ್ದಾನೆ ಎಂದುಸಚಿವಾಲಯ ತಿಳಿಸಿದೆ.