×
Ad

ಎಲ್‌ಐಸಿಯ ‘ನ್ಯೂಜೀವನ್ ಶಾಂತಿ’ ಆ್ಯನುಟಿ ದರ ಪರಿಷ್ಕರಣೆ

Update: 2023-01-05 23:54 IST

ಮುಂಬೈ: ಭಾರತೀಯ  ಜೀವವಿಮಾ ನಿಗಮವು  05-01-2023ರಿಂದ ಅನ್ವಯವಾಗುವಂತೆ ಎಲ್‌ಐಸಿ ನ್ಯೂಜೀವನ್ ಶಾಂತಿ (ಪ್ಲ್ಯಾನ್ ನಂ.858)ಯ  ಆ್ಯನುಟಿ  (ವರ್ಷಾಶನ)  ಯೋಜನೆಯನ್ನು ಮೇಲ್ಮುಖವಾಗಿ ಪರಿಷ್ಕರಿಸಿದೆ. ವರ್ಧಿಸಲ್ಪಟ್ಟ ಆ್ಯನುಟಿ ದರಗಳು 05.01.2023ರಿಂದ ಮಾರಾಟಕ್ಕೆ ಲಭ್ಯವಿರುವುದು. ಅಧಿಕ ಖರೀದಿ ದರ ಮೇಲಿನ  ಇನ್‌ಸೆಂಟವ್‌ಗಳನ್ನು  ಕೂಡಾ ಹೆಚ್ಚಿಸಲಾಗಿದೆ. ಅದು ಪ್ರತಿ ಸಾವಿರಕ್ಕೆ 3 ರೂ.ನಿಂದ 9.75 ರೂ.ವರೆಗೆ ಇರಲಿದ್ದು, ಖರೀದಿ ದರ ಹಾಗೂ ಆಯ್ಕೆ ಮಾಡಿಕೊಂಡ  ಮುಂದೂಡಿಕೆಯ (ಡೆಫರ್‌ಮೆಂಟ್) ಅವಧಿಯನ್ನು ಆಧರಿಸಿರುತ್ತದೆ.

ಇದೊಂದು ಏಕ ಪ್ರೀಮಿಯಂನ ಯೋಜನೆಯಾಗಿದ್ದು, ಪಾಲಿಸಿದಾರನು ಸಿಂಗಲ್ ಲೈಫ್ ಹಾಗೂ ಜಾಯಿಂಟ್ ಲೈಫ್ ಡೆಫರ್ಡ್‌ ಆ್ಯನುಟಿ  ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಮುಂದೂಡಿಕೆಯ ಅವಧಿ (ಡೆಫರ್‌ಮೆಂಟ್ ಪೀರಿಯಡ್)ಯ ಆನಂತರ  ಭವಿಷ್ಯದಲ್ಲಿ ನಿಯಮಿತವಾದ  ಆದಾಯ ನೀಡುವ ಯೋಜನೆಯನ್ನು ಹೊಂದಲು ಬಯಸುವಂತಹ ಉದ್ಯೋಗಿಗಳು ಹಾಗೂ ಸ್ವ ಉದ್ಯೋಗಿಗಳಿಗೆ ಇದೊಂದು ಹೇಳಿ ಮಾಡಿಸಿದಂತಹ ಯೋಜನೆಯಾಗಿದೆ. ಆರಂಭಿಕ ಹಂತದಿಂದಲೇ ಭವಿಷ್ಯದಲ್ಲಿನ ನಿವೃತ್ತಿಯ ಕುರಿತಾಗಿ ಯೋಜನೆಗಳನ್ನು ರೂಪಿಸುವ ಯುವ ವೃತ್ತಿಪರರಿಗೆ ಡೆಫರ್ಡ್‌ ಆ್ಯನುಟಿ ಪ್ಲ್ಯಾನ್ ಒಂದು ವರದಾನವಾಗಿದೆ.

ಪಾಲಿಸಿಯ  ಆರಂಭದಿಂದಲೇ ಆ್ಯನುಟಿ ದರಗಳು ಖಾತರಿಗೊಂಡಿರುತ್ತವೆ. ನ್ಯೂಜೀವನ್ ಶಾಂತಿ ಯೋಜನೆಯಡಿ ಆ್ಯನುಟಿ ಮೊತ್ತವನ್ನು ಎಲ್‌ಐಸಿ ವೆಬ್‌ಸೈಟ್‌ನಲ್ಲಿ ಹಾಗೂ ವಿವಿಧ ಎಲ್‌ಐಸಿ ಆ್ಯಪ್‌ಗಳಲ್ಲಿ ಒದಗಿಸಲಾಗುವ ಕ್ಯಾಲುಕ್ಯುಲೇಟರ್ ಮೂಲಕ ಲೆಕ್ಕಹಾಕಬಹುದಾಗಿದೆ.

ಈ ಯೋಜನೆಯು ಆಫ್‌ಲೈನ್ ಹಾಗೂ ಆನ್‌ಲೈನ್ ಮೂಲಕ ಲಭ್ಯವಿರುತ್ತದೆ. ಹೆಚ್ಚಿನ ವಿವರಗಳಿಗೆ www.licindia.in ಅಥವಾ ಇತರ ಯಾವುದೇ ಎಲ್‌ಐಸಿ ಶಾಖೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಭಾರತೀಯ ಜೀವವಿಮಾ ನಿಗಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Similar News