ಮಂಗಳೂರು: ದ.ಕ.ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ; ಜೆಡಿಎಸ್
ಮಂಗಳೂರು: ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್ ಸ್ಪರ್ಧಿಸಲಿದೆ. ಈಗಾಗಲೇ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಜಾತ್ಯತೀತ ಜನತಾದಳದ ದ.ಕ. ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ತಿಳಿಸಿದರು.
ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಅದರಲ್ಲಿ ಆಯ್ಕೆಯಾದ ಮೂರು ಹೆಸರುಗಳ ಪೈಕಿ ಒಂದನ್ನು ಆಯ್ಕೆ ಮಾಡಿ ಹೈಕಮಾಂಡ್‌ಗೆ ಸಲ್ಲಿಸಲಾಗುತ್ತದೆ. ಈ ಬಳಿಕ ರಾಜ್ಯಾಧ್ಯಕ್ಷರು ಈ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ. ಫೆಬ್ರವರಿ ಮೊದಲ ವಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪಂಚರತ್ನ ಯಾತ್ರೆಯ ಮೂಲಕ ದ.ಕ.ದಲ್ಲಿ ಸಭೆ ನಡೆಸುವ ಕುರಿತು ನಿರ್ಧಾರವಾಗಿದೆ ಎಂದು ಹೇಳಿದರು.
ಈ ಸಂದರ್ಭ ದ.ಕ. ಜೆಡಿಎಸ್‌ನ ನೂತನ ಅಧ್ಯಕ್ಷರಾಗಿ ಜಾಕೆ ಮಾಧವ ಗೌಡ, ಮಹಾಪ್ರಧಾನ ಕಾರ್ಯದರ್ಶಿಯಾಗಿ
ಜಿಲ್ಲಾ ವಕ್ತಾರರಾಗಿ ಸುಶೀಲ್ ನೊರೊನ್ಹಾ, ಕಾರ್ಯಾಧ್ಯಕ್ಷರಾಗಿ ನಝೀರ್ ಉಳ್ಳಾಲ, ವಸಂತ್ ಪೂಜಾರಿ, ಇಕ್ಬಾಲ್ ಅಹ್ಮದ್ ಮುಲ್ಕಿ, ಹಿರಿಯ ಉಪಾಧ್ಯಕ್ಷರಾಗಿ ಪ್ರವೀಣ್‌ಚಂದ್ರ ಜೈನ್, ಉಪಾಧ್ಯಕ್ಷರಾಗಿ ಅಝೀಝ್ ಕುದ್ರೋಳಿ, ಪ್ರಧಾನ ಕಾರ್ಯದರ್ಶಿಯಾಗಿ ಕನಕದಾಸ, ಧನರಾಜ್, ಕಾರ್ಯದರ್ಶಿಯಾಗಿ ಲತೀಫ್ ವಳಚ್ಚಿಲ್, ಸಂಘಟನಾ ಕಾರ್ಯದರ್ಶಿಯಾಗಿ ಕಿಶೋರ್ ಅರಂಪಾಡಿ, ಕೋಶಾಧಿಕಾರಿಯಾಗಿ ಗಂಗಾಧರ್ ಉಳ್ಳಾಲ, ರಾಜ್ಯ ಸಮಿತಿಗೆ ಶ್ರೇಯಮ್ಸ್ ಕುಮಾರ್, ದಯಾಕರ್ ಆಳ್ವ ಹಾಗೂ 26 ಮಂದಿಯ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ನಾಯಕರಾದ ಸುಶೀಲ್ ನೊರೊನ್ಹಾ, ರಾಮ್‌ಗಣೇಶ್, ನಝೀರ್ ಉಳ್ಳಾಲ, ಇಕ್ಬಾಲ್ ಮುಲ್ಕಿ ಉಪಸ್ಥಿತರಿದ್ದರು.