ಮಂಗಳೂರು: ಚೆಕ್ ಹಸ್ತಾಂತರ
Update: 2023-01-06 18:52 IST
ಮಂಗಳೂರು: ಮಂಗಳೂರು ಘಟಕದ ಗೃಹರಕ್ಷಕಿ ಸುಲೋಚನಾರ ಪುತ್ರಿ ಶ್ರೇಯಾ ಎಸ್.ಶೆಟ್ಟಿಯ ಎರಡನೇ ವರ್ಷದ ಬಿ.ಇ. (ಇಂಜಿನಿಯರಿಂಗ್) ವ್ಯಾಸಂಗಕ್ಕಾಗಿ ಗೃಹ ರಕ್ಷಕ ಕ್ಷೇಮಾಭಿವೃದ್ಧಿ ನಿಧಿಯಿಂದ ಮಂಜೂರಾದ 12,000 ರೂ. ಸಹಾಯಧನದ ಚೆಕ್ಕನ್ನು ನಗರದ ಮೇರಿಹಿಲ್‌ನಲ್ಲಿರುವ ದ.ಕ.ಜಿಲ್ಲಾ ಗೃಹರಕ್ಷಕದಳದ ಕಚೇರಿಯಲ್ಲಿ ಶುಕ್ರವಾರ ಗೃಹರಕ್ಷಕದಳದ ಸಮಾದೇಷ್ಟ ಡಾ.ಮುರಳಿ ಮೋಹನ್ ಚೂಂತಾರು ಹಸ್ತಾಂತರಿಸಿದರು.
ಗೃಹರಕ್ಷಕರ ಮಕ್ಕಳ ವಿದ್ಯಾಭ್ಯಾಸ ಹಾಗೂ ಕುಟುಂಬಸ್ಥರಿಗೆ ವೈದ್ಯಕೀಯ ವೆಚ್ಚಕ್ಕೆ ಗೃಹ ರಕ್ಷಕ ಕ್ಷೇಮಾಭಿವೃದ್ಧಿ ನಿಧಿಯಿಂದ ಸಹಾಯ ಧನವನ್ನು ನೀಡಲಾಗುತ್ತದೆ.
ಈ ಸಂದರ್ಭ ಜಿಲ್ಲಾ ಗೃಹರಕ್ಷಕ ದಳದ ಉಪಸಮಾದೇಷ್ಟ ರಮೇಶ್, ಕಚೇರಿ ಅಧೀಕ್ಷಕ ರತ್ನಾಕರ ಎಂ., ಪ್ರಥಮ ದರ್ಜೆ ಸಹಾಯಕಿ ಅನಿತಾಟಿ.ಎಸ್, ಮೀನಾಕ್ಷಿ, ಗೃಹರಕ್ಷಕರಾದ ದಿವಾಕರ, ಸುನಿಲ್ ಕುಮಾರ್, ಧನಂಜಯ್, ದೀಪ್, ರವಿ ಉಪಸ್ಥಿತರಿದ್ದರು.