×
Ad

ಮಿತ್ತೂರು: 'ಕೆಜಿಎನ್ ಫಿದಾಕ್-23'ಗೆ ಚಾಲನೆ

Update: 2023-01-06 18:59 IST

ವಿಟ್ಲ, ಜ.6: ಮಾಣಿ ದಾರುಲ್ ಇರ್ಶಾದ್ ಅಧೀನದಲ್ಲಿ ಮಿತ್ತೂರು ಕೆಜಿಎನ್ ಕ್ಯಾಂಪಸ್ ನಲ್ಲಿ ಕಾರ್ಯಾಚರಿಸುತ್ತಿರುವ ಕೆಜಿಎನ್ ದಅವಾ ಕಾಲೇಜಿನ ಪಿಯುಸಿ ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳ ವಾರ್ಷಿಕ ಸಾಹಿತ್ಯ ಕಲಾ ಪ್ರತಿಭಾ ಸಂಗಮ ಕಾರ್ಯಕ್ರಮ 'ಫಿದಾಕ್ 23'ಗೆ ಶುಕ್ರವಾರ ಚಾಲನೆ ದೊರೆಯಿತು.

ಮೂರುದಿನಗಳ ಕಾಲ ನಡೆಯುವ 'ಫಿದಾಕ್ 23'ನಲ್ಲಿ 80 ವಿವಿಧ ಸ್ಪರ್ಧೆಗಳಲ್ಲಿ 200 ಸ್ಪರ್ಧಾರ್ಥಿಗಳು ಭಾಗವಹಿಸುವರು. ದಾರುಲ್ ಇರ್ಶಾದ್ ಸಂಸ್ಥೆಯ ಅಧ್ಯಕ್ಷ ಝೈನುಲ್ ಉಲಮಾ ಖಾಝಿ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು.

ಕೆಜಿಎನ್ ದ‌ಅವಾ ಕಾಲೇಜಿನ ಪ್ರಾಂಶುಪಾಲ ಸೈಯದ್ ಸ್ವಲಾಹುದ್ದೀನ್ ಅಲ್ ಅದನಿ ತಂಙಳ್ ಉದ್ಘಾಟಿಸಿದರು.

 ದಾರುಲ್ ಇರ್ಶಾದ್ ಮ್ಯಾನೇಜಿಂಗ್ ಡೈರೆಕ್ಟರ್ ಮುಹಮ್ಮದ್ ಶರೀಫ್ ಸಖಾಫಿ ಮಾಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಕಳ ತ್ವಬಾ ಗಾರ್ಡನ್ ಪ್ರಾಂಶುಪಾಲ ಅಹ್ಮದ್ ಶರೀಫ್ ಸ‌ಅದಿ ಅಲ್ ಕಾಮಿಲ್ ಕಿಲ್ಲೂರು, ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್, ಉದ್ಯಮಿ ಹನೀಫ್ ಹಾಜಿ ಗೋಳ್ತಮಜಲು, ಅಶೋಕ್ ಕುಮಾರ್  ರೈ ಪುತ್ತೂರು, ಡಾ.ಶಾಫಿ, ಡಾ.ಸರ್ಫ್ರಾಝ್, ಡಾ.ಫಾರೂಕ್ ಮುಂತಾದವರು ಉಪಸ್ಥಿತರಿದ್ದರು.

ಕೆಜಿಎನ್ ದ‌ಅವಾ ಕಾಲೇಜಿನ ಉಪನ್ಯಾಸಕ ಹುಸೈನ್ ಮು‌ಈನಿ ಅಲ್ ಅಹ್ಸನಿ ಸ್ವಾಗತಿಸಿದರು. ವಿದ್ಯಾರ್ಥಿ ಪ್ರತಿನಿಧಿ ಅಮ್ಮಾರ್ ನೀರಕಟ್ಟೆ ವಂದಿಸಿದರು.

Similar News