ಉತ್ತರಾಖಂಡ ಭೂಕುಸಿತ: ಸುಮಾರು 600 ಕುಟುಂಬಗಳನ್ನು ತಕ್ಷಣವೇ ಸ್ಥಳಾಂತರಿಸಲು ಆದೇಶ

Update: 2023-01-07 04:36 GMT

ಹೊಸದಿಲ್ಲಿ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ Uttarakhand Chief Minister Pushkar Singh Dham ಅವರು ಶನಿವಾರ ಉತ್ತರಾಖಂಡದ "ಕುಸಿಯುತ್ತಿರುವ ಪಟ್ಟಣ" ಜೋಶಿಮಠಕ್ಕೆ ಭೇಟಿ ನೀಡಲಿದ್ದು, ದೇವಸ್ಥಾನ ಹಾಗೂ  ಹಲವಾರು ಮನೆಗಳ ಕುಸಿತದ ನಂತರ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಸುಮಾರು 600 ಕುಟುಂಬಗಳನ್ನು ತಕ್ಷಣವೇ ಸ್ಥಳಾಂತರಿಸುವಂತೆ ಅವರು ಆದೇಶಿಸಿದ್ದಾರೆ.

ಭೂಮಿ ಕುಸಿತದ ಕುರಿತು "ಕ್ಷಿಪ್ರ ಅಧ್ಯಯನ" ನಡೆಸಲು ಕೇಂದ್ರವು ತಜ್ಞರ ಸಮಿತಿಯನ್ನು ರಚಿಸಿದೆ. ಮಾನವ ನೆಲೆನಿಂತಿರುವ ಪ್ರದೇಶಗಳು, ಕಟ್ಟಡಗಳು, ಹೆದ್ದಾರಿಗಳು, ಮೂಲಸೌಕರ್ಯಗಳು ಮತ್ತು ನದಿ ವ್ಯವಸ್ಥೆಗಳ ಮೇಲೆ ಭೂ ಕುಸಿತದ ಪರಿಣಾಮಗಳನ್ನು ಸಮಿತಿಯು ಅಧ್ಯಯನ ನಡೆಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆ. ಜೋಶಿಮಠದ ಬೀಳುವ ಸ್ಥಿತಿಯಲ್ಲಿರುವ ಮನೆಗಳಲ್ಲಿ ವಾಸಿಸುತ್ತಿರುವ ಸುಮಾರು 600 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.  ತಕ್ಷಣದ ಮತ್ತು ದೀರ್ಘಾವಧಿಯ ಕ್ರಿಯಾ ಯೋಜನೆಗಳನ್ನು ಕೂಡಲೇ ಸಿದ್ಧಪಡಿಸಬೇಕು. ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳು ತಕ್ಷಣವೇ  ಲಭ್ಯವಿರಬೇಕು ಹಾಗೂ  ಜನರನ್ನು ಏರ್‌ಲಿಫ್ಟಿಂಗ್ ಮಾಡಲು ವ್ಯವಸ್ಥೆ ಮಾಡಬೇಕು'' ಎಂದು ಧಾಮಿ  ಹೇಳಿದರು.

Similar News