ವಾಟ್ಸ್‌ಆ್ಯಪ್ ‘ಕೆಪ್ಟ್ ಮೆಸೇಜಸ್’ ಅಪ್‌ಡೇಟ್ ಹೇಗಿರಲಿದೆ?

ತಾಂತ್ರಿ‘ಕತೆ’

Update: 2023-01-07 08:09 GMT

ಮೆಟಾ-ಮಾಲಕತ್ವದ ಮೆಸೇಜಿಂಗ್ ಪ್ಲಾಟ್ ಫಾರ್ಮ್ ವಾಟ್ಸ್‌ಆ್ಯಪ್ ‘ಕೆಪ್ಟ್ ಮೆಸೇಜಸ್’ ಬಗ್ಗೆ ಹೊಸ ಅಪ್‌ಡೇಟ್ ಒಂದನ್ನು ನೀಡಿದೆ. ಚಾಟ್‌ನಲ್ಲಿ ಕೆಪ್ಟ್ ಸಂದೇಶಗಳನ್ನು ಬುಕ್‌ಮಾರ್ಕ್ ಮಾಡಲು ಬಳಕೆದಾರರನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಕಂಪೆನಿಯು ಕಾರ್ಯ ನಿರ್ವಹಿಸುತ್ತಿದೆ.

ತ್ವರಿತ ಸಂದೇಶ ಕಳುಹಿಸುವ ವೇದಿಕೆಯು ಈಗ ಮತ್ತೊಂದು ಹೊಸ ಹೆಜ್ಜೆ ಇಡುತ್ತಿದ್ದು, ಅದು ಬಳಕೆದಾರರಿಗೆ ಕೆಪ್ಟ್ ಸಂದೇಶಗಳನ್ನು ‘ಗುರುತಿಸಲು’ ಸುಲಭವಾಗಲಿದೆ.

ಕಣ್ಮರೆಯಾಗುವ ಸಂದೇಶವನ್ನು ಉಳಿಸಲಾಗಿದೆ / ಇರಿಸಲಾಗಿದೆ ಮತ್ತು ಚಾಟ್‌ನಿಂದ ಕಣ್ಮರೆಯಾಗುವುದಿಲ್ಲ ಎಂಬ ದೃಶ್ಯ ಸೂಚಕವಾಗಿ ಐಕಾನ್ ಬಳಕೆದಾರರಿಗೆ ಸಹಾಯ ಮಾಡುತ್ತದೆ.

ಇದು ಮುಂಬರುವ ವಾಟ್ಸ್‌ಆ್ಯಪ್ ಬೀಟಾ ಅಪ್‌ಡೇಟ್‌ನೊಂದಿಗೆ ಬರುವ ನಿರೀಕ್ಷೆಯಿದೆ ಮತ್ತು ಆಂಡ್ರಾಯ್ಡಾ, ಐಒಎಸ್ ಮತ್ತು ಡೆಸ್ಕ್‌ಟಾಪ್ ಆವೃತ್ತಿಗಳಿಗೆ ಲಭ್ಯವಾಗುವ ಸಾಧ್ಯತೆಯಿದೆ.

ಕೆಪ್ಟ್ ಮೆಸೇಜೆಸ್ ವೈಶಿಷ್ಟ್ಯ ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?

ಕೆಪ್ಟ್ ಮೆಸೇಜೆಸ್ ವೈಶಿಷ್ಟ್ಯವು ತಾತ್ಕಾಲಿಕವಾಗಿ ಕಣ್ಮರೆಯಾಗುವ ಸಂದೇಶವನ್ನು ಪ್ರಮಾಣಿತ ವಾಟ್ಸ್‌ಆ್ಯಪ್ ಸಂದೇಶವಾಗಿ ಪರಿವರ್ತಿಸುತ್ತದೆ. ಅದರ ಅವಧಿ ಮುಗಿದ ನಂತರವೂ ಬಳಕೆದಾರರು ಅದನ್ನು ಚಾಟ್‌ನಲ್ಲಿ ಹುಡುಕುತ್ತಾರೆ. ವಾಟ್ಸ್‌ಆ್ಯಪ್ ಚಾಟ್ ಮಾಹಿತಿ ಟ್ಯಾಬ್‌ನಲ್ಲಿ ಕೆಪ್ಟ್ ಮೆಸೇಜೆಸ್ ಎಂಬ ಹೊಸ ವಿಭಾಗವನ್ನು ಸೇರಿಸುವ ನಿರೀಕ್ಷೆಯಿದೆ. ಅಲ್ಲಿ ಬಳಕೆದಾರರು ಈ ಸಂದೇಶಗಳನ್ನು ಹುಡುಕಲು ಸಾಧ್ಯವಾಗುತ್ತದೆ ಮತ್ತು ಈ ವಿಭಾಗವು ಸಂಭಾಷಣೆಯಲ್ಲಿ ಎಲ್ಲಾ ಸದಸ್ಯರಿಗೆ ಲಭ್ಯವಿರುತ್ತದೆ.

ಸಂದೇಶಗಳು ಕಣ್ಮರೆಯಾಗುವುದು ಆಪ್ಷನಲ್ ಆಗಿದ್ದು, ಅದು ಬಳಕೆದಾರರಿಗೆ ಹೆಚ್ಚಿನ ಗೌಪ್ಯತೆಗೆ ಸಹಾಯವಾಗಲಿದೆ. ಬಳಕೆದಾರರು ಕಣ್ಮರೆಯಾಗುತ್ತಿರುವ ಸಂದೇಶಗಳನ್ನು ಸಕ್ರಿಯಗೊಳಿಸಿದಾಗ, ಅವರು ಕಳುಹಿಸಿದ ಸಮಯದ ನಂತರ 24 ಗಂಟೆಗಳು, 7 ದಿನಗಳು ಅಥವಾ 90 ದಿನಗಳಲ್ಲಿ ಸಂದೇಶಗಳನ್ನು ಕಣ್ಮರೆಯಾಗುವಂತೆ ಮಾಡಿಕೊಳ್ಳುವ ಆಪ್ಷನ್ ಸಹ ನೀಡಲಿದೆ. ಇತ್ತೀಚೆಗಷ್ಟೇ ವಾಟ್ಸ್‌ಆ್ಯಪ್ ಮೆಸೇಜ್ ಯೂವರ್‌ಸೆಲ್ಫ್ ಫೀಚರ್ ಅನ್ನು ಕೂಡ ಪರಿಚಯಿಸಿದೆ. ಹೆಸರೇ ಸೂಚಿಸುವಂತೆ, ಈ ಫೀಚರ್ ಅನ್ನು ಬಳಕೆದಾರರು ತಮ್ಮ ಸ್ವಂತ ಸಂಖ್ಯೆಗೆ ನೋಟ್, ಫೋಟೊಗಳು, ವೀಡಿಯೊಗಳು, ವಾಯ್ಸೆ ಮೆಸೇಜ್ ಕಳುಹಿಸಲು ಆಪ್ಷನ್ ನೀಡಲಿದೆ.

**********************************

ಮೊದಲ ಟೆಕ್ನೊ ಫೋನ್ ಸ್ಪೆಷಾಲಿಟಿ ಏನು?

ಹೊಸ ಮಾದರಿಯ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಸಾಕಷ್ಟು ಭರವಸೆ ಮೂಡಿಸಿರುವ ‘ಟೆಕ್ನೊ’ ಕಂಪೆನಿಯೂ ದೇಶದಲ್ಲಿ ಮೊದಲ ಬಾರಿಗೆ ಪ್ರೀಮಿಯಂ ಸ್ಮಾರ್ಟ್‌ಫೋನ್ ರಿಲೀಸ್ ಮಾಡಿದ್ದು, ಇದರ ಬಗ್ಗೆ ಗ್ಯಾಡ್ಜೆಟ್ ವಿಮರ್ಶಕರು ಕಾತುರದಿಂದ ಕಾಯುತ್ತಿದ್ದಾರೆ.

ಚೀನಾ ಮೂಲದ ಟೆಕ್ನೊ ಕಂಪೆನಿ, ಪ್ರೀಮಿಯಂ ಇಲೆಕ್ಟ್ರಾನಿಕ್ ವಸ್ತುಗಳನ್ನು ಉತ್ಪಾದಿಸಿ ಮಾರಾಟ ಮಾಡುವುದರಲ್ಲಿ ನೈಪುಣ್ಯತೆಯನ್ನು ಪಡೆದಿದೆ. ಟೆಕ್ನೊ, Phantom X2 ಹೆಸರಿನ ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸಿದ್ದು, 39,999ರೂ. ಎಂದು ಬೆಲೆ ನಿಗದಿ ಮಾಡಿದೆ. ಈ ಫೋನ್ ರಿಟೇಲ್ ಶಾಪ್ ಹಾಗೂ ಅಮೆಝಾನ್‌ನಲ್ಲೂ ಲಭ್ಯವಿದೆ. ಇದೇ ಜನವರಿ 2ರಿಂದ ಪ್ರಿ ಬುಕ್ಕಿಂಗ್ ಸಹ ಆರಂಭವಾಗಿದೆ. ಜನವರಿ 9ರಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಕಂಪೆನಿ ತಿಳಿಸಿದೆ.

ವೈಶಿಷ್ಟ್ಯ ಏನು?:

ಈ ಫೋನ್ 5ಜಿ ಟೆಕ್ನಾಲಜಿ ಹೊಂದಿದ್ದು, ಎರಡು ಸಿಮ್ ಬಳಸುವ ಸೌಲಭ್ಯವಿದೆ. 4nm (ನ್ಯಾನೊ ಮೀಟರ್) ಸಣ್ಣಗಿರುವ Dimensity 9,000 ಪ್ರೊಸೆಸರ್ ಹೊಂದಿದೆ. ಇದರಲ್ಲಿರುವ ಬ್ಯಾಕ್ ಕ್ಯಾಮರಾ 64ಎಂಪಿ ಅಲ್ಫಾ ಕ್ಲಿಯರ್ ನೈಟ್ ಕ್ಯಾಮರಾ ಭಾರೀ ವಿಶೇಷ. ಇಮೇಜ್ ಸ್ಟೆಬಿಲೈಸೇಷನ್, ಡ್ಯುಯಲ್ ವೀಡಿಯೊ, ಎಚ್‌ಡಿಆರ್ ವೀಡಿಯೊ, 4ಕೆ ವೀಡಿಯೊ ಸೌಲಭ್ಯ ಇದ್ದು, ಇದು ಗ್ರಾಹಕರಿಗೆ ಉತ್ತಮ ಫೋಟೊಗ್ರಫಿಯ ಅನುಭವ ಕೊಡಲಿದೆ.

7.8 ಇಂಚಿನ ಡಿಸ್‌ಪ್ಲೇ ಇದ್ದು, 5160 mAh ಬ್ಯಾಟರಿ ಸಾಮರ್ಥ್ಯವಿದೆ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ 25 ದಿನಗಳ ಸ್ಟಾಂಡ್ ಬೈ, ಅಂದರೆ ಚಾರ್ಜ್ ಮಾಡದೇ ಹಾಗೆಯೇ ಇಡಬಹುದಾದ ಸಮಯವನ್ನು ಹೊಂದಿದ್ದು 23 ಗಂಟೆಗಳ ಕಾಲ ನಿರಂತರವಾಗಿ ಬಳಸಬಹುದು. 45W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಈ ಫೋನ್‌ನಲ್ಲಿದೆ ಇರಲಿದೆ ಎಂದು ಕಂಪೆನಿ ತಿಳಿಸಿದೆ

**********************************

ಪ್ರಪಂಚದ ಮೊದಲ ‘ವೈರ್‌ಲೆಸ್ ಟಿವಿ’.!!

ಮನೆಗಳಲ್ಲಿ ಟಿವಿಗಳನ್ನು ಫಿಟ್ ಮಾಡುವುದೇ ಒಂದು ದೊಡ್ಡ ಸಾಹಸ, ಅಂದುಕೊಂಡ ಸ್ಥಳದಲ್ಲಿ ಟಿವಿ ಅಳವಡಿಸುವುದ್ದಕ್ಕೆ ವೈರ್ ಎಳೆಯುವುದು ಪ್ರತಿಯೊಬ್ಬರ ಮನೆಯಲ್ಲಿ ಈಗಲೂ ದೊಡ್ಡ ಸಮಸ್ಯೆ ಆಗಿಯೇ ಉಳಿದು ಬಿಟ್ಟಿದೆ. ವೈರ್‌ಗಳಿಂದ ಮನೆಯ ಸೌಂದರ್ಯವೂ ಕೆಡುವುದೆಂಬ ಚಿಂತೆ ಮನೆ ಮಾಲಕರದ್ದು. ಇನ್ನು ಮುಂದೆ ಆ ಚಿಂತೆಯನ್ನು ವೈರ್‌ಲೆಸ್ ಟಿವಿಗಳು ನೀಗಿಸಲಿವೆ.

2023ರಲ್ಲಿ ಪ್ರಪಂಚದ ಮೊದಲ ವೈರ್‌ಲೈಸ್ ಟಿವಿ ಪರಿಚಯವಾಗಲಿದೆ. ವೈರ್‌ಲೈಸ್ ಟಿವಿ ಎಂದು ಹೇಳಿಕೊಳ್ಳುವ ‘ದಿ ಡಿಸ್‌ಪ್ಲೇಸ್ ಟಿವಿ’ ಇದು. ಈ ಡಿಸ್‌ಪ್ಲೇಸ್ ಟಿವಿಯ ವೈಶಿಷ್ಟ್ಯವೇನೆಂದರೆ, ಇದು ಸಂಪೂರ್ಣ ಬ್ಯಾಟರಿಯ ಮೇಲೆಯೇ ಅವಲಂಬಿತವಾಗಿರುತ್ತದೆ. ಬ್ಯಾಟರಿಯಿಂದ ಚಾಲಿತವಾಗಿರುವ ಈ ಒಎಲ್‌ಇಡಿ ಟಿವಿಯು ಪವರ್ ಔಟ್‌ಲೆಟ್‌ನಿಂದ ದೂರದಲ್ಲಿ 30 ದಿನಗಳ ಕಾಲ ಟಿವಿ ವೀಕ್ಷಣೆ ಮಾಡಬಹುದಾಗಿದೆ ಮತ್ತು ಇದು ನಮ್ಮ ಮನೆಗಳ ಸುತ್ತಲೂ ಟಿವಿಗಳನ್ನು ಇರಿಸುವ ವಿಧಾನವನ್ನು ಕ್ರಾಂತಿಕಾರಕಗೊಳಿಸಬಹುದು ಎಂಬ ಚರ್ಚೆ ಟೆಕ್ ವಲಯದಲ್ಲಿ ನಡೆಯುತ್ತಿದೆ, ಡಿಸ್‌ಪ್ಲೇಸ್ ಟಿವಿಯಿಂದ ಟಿವಿಗಳ ಅಳವಡಿಕೆಯ ಕಿರಿಕಿರಿ ತಪ್ಪಲಿದೆ. ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸಲು ಫ್ಲೆಕ್ಸಿಬಲ್ ಆಗಿರಲಿದೆ.

Similar News

ಜಗದಗಲ
ಜಗ ದಗಲ