×
Ad

ಬೋಳಿಯಾರು: ಸ್ವಚ್ಛತಾ ಅರಿವಿನ ಜಾಥಾ

Update: 2023-01-07 20:02 IST

ಮಂಗಳೂರು: ಬೋಳಿಯಾರ್‌ನ ದ.ಕ.ಜಿಪಂ ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳು ಶನಿವಾರ ಶಿಕ್ಷಕಿ ಗಾಯತ್ರಿಯ ನೇತೃತ್ವದಲ್ಲಿ ಸ್ವಚ್ಛತಾ ಅರಿವಿನ ಜಾಥಾ ನಡೆಸಿದರು.

ರ್‍ಯಾಲಿ ಮೂಲಕ ಶಾಲಾ ವಠಾರದ ಬಳಿಯ ಮನೆ ಹಾಗೂ ಅಂಗಡಿಗಳಿಗೆ ತೆರಳಿ ವಿದ್ಯಾರ್ಥಿಗಳು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.

ಹಸಿಕಸ ಮತ್ತು ಒಣ ಕಸದ ಬಗ್ಗೆ ಅರಿವು ಮೂಡಿಸಿದ ವಿದ್ಯಾರ್ಥಿಗಳು ಕಸದ ನಿರ್ವಹಣೆಯ ಬಗ್ಗೆ ಹಾಗೂ ಅವುಗಳನ್ನು ಬೇರ್ಪಡಿಸುವ ಬಗ್ಗೆ ಮಾಹಿತಿ ನೀಡಿದರು.

ರ್‍ಯಾಲಿಯಲ್ಲಿ ಶಾಲೆಯ ಅಕ್ಷರದಾಸೋಹ ಸಿಬ್ಬಂದಿ ವರ್ಗವೂ ಭಾಗವಹಿಸಿತ್ತು.

Similar News