ದಿಲ್ಲಿ ಅಪಘಾತ: ಮೃತ ಯುವತಿಯ ಕುಟುಂಬಕ್ಕೆ ಶಾರುಖ್ ಖಾನ್ ಎನ್ಜಿಒ ನೆರವು
Update: 2023-01-07 22:16 IST
ಹೊಸದಿಲ್ಲಿ,ಜ.7: ದಿಲ್ಲಿಯ ಸುಲ್ತಾನ್ಪುರಿಯಲ್ಲಿ ಹೊಸ ವರ್ಷದ ಮೊದಲ ದಿನವೇ ಅಪಘಾತಕ್ಕೀಡಾಗಿ ಭೀಕರ ಸಾವನ್ನಪ್ಪಿದ್ದ ಅಂಜಲಿ ಸಿಂಗ್ ಅವರ ಕುಟುಂಬದ ನೆರವಿಗೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಎನ್ಜಿಒ ಮೀರ್ ಫೌಂಡೇಷನ್ ಧಾವಿಸಿದೆ.
ಅಂಜಲಿ ಕುಟುಂಬಕ್ಕೆ ಮೀರ್ ಫೌಂಡೇಷನ್ ಹಣದ ನೆರವನ್ನು ನೀಡಿದ್ದು,ಮೊತ್ತವನ್ನು ಬಹಿರಂಗಗೊಳಿಸಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ.
ಹೊಸ ವರ್ಷದ ನಸುಕಿನಲ್ಲಿ ಅಂಜಲಿ ಚಲಾಯಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದ ಕಾರು ಆಕೆಯನ್ನು 12 ಕಿ.ಮೀ.ವರೆಗೆ ಎಳೆದೊಯ್ದಿತ್ತು. ಅಂಜಲಿ ತನ್ನ ಕುಟುಂಬದ ಏಕಮೇವ ಆಧಾರಸ್ತಂಭವಾಗಿದ್ದರು.
ಪ್ರಕರಣದಲ್ಲಿ ಈವರೆಗೆ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.