×
Ad

ಇಸ್ರೇಲ್ ನಿಂದ ಗಾಝಾ ಪಟ್ಟಿಯ ಬಳಿ ಕಾಂಕ್ರೀಟ್ ಗೋಡೆ ನಿರ್ಮಾಣ

Update: 2023-01-07 22:18 IST

ಜೆರುಸಲೇಂ, ಜ.7: ಗಾಝಾ ಪಟ್ಟಿಯ ಬಳಿ ಹೆದ್ದಾರಿಗಳನ್ನು ಟ್ಯಾಂಕ್ ನಿರೋಧಕ ಕ್ಷಿಪಣಿಯಿಂದ ರಕ್ಷಿಸಲು ಕಾಂಕ್ರೀಟ್ ಗೋಡೆಗಳ ನಿರ್ಮಾಣವನ್ನು ಇಸ್ರೇಲ್ ಆರಂಭಿಸಿದೆ ಎಂದು ವರದಿಯಾಗಿದೆ.

ಇಸ್ರೇಲಿ ನಗರಗಳನ್ನು ದಾಳಿಯಿಂದ ರಕ್ಷಿಸುವ ಉದ್ದೇಶದಿಂದ ಗಾಝಾ ಪಟ್ಟಿಯ ಬಳಿ 4.6 ಕಿ.ಮೀ ಉದ್ದದ ಕಾಂಕ್ರೀಟ್ ಗೋಡೆ ನಿರ್ಮಾಣವಾಗಲಿದೆ. ಭದ್ರತಾ ಕಾರಿಡಾರ್ನಲ್ಲಿ ಕೆಲಸ ಆರಂಭವಾಗಿದ್ದು ಇದು ತುರ್ತು ಸಮಯದಲ್ಲಿ ದಾಳಿಯ ಆತಂಕವಿಲ್ಲದೆ ಜನರ ಚಲನವಲನಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದ ಯೋಜನೆಯಾಗಿದೆ ಎಂದು ಇಸ್ರೇಲ್ ನ ರಕ್ಷಣಾ ಇಲಾಖೆ ಹೇಳಿದೆ.

Similar News