×
Ad

ಸೂರ್ಯಕುಮಾರ್‌ ಉತ್ತಮ ಪ್ರದರ್ಶನ: ತುಳುವಿನಲ್ಲಿ ಅಭಿನಂದಿಸಿದ ಕೆ.ಎಲ್‌ ರಾಹುಲ್

ತುಳುವಿನಲ್ಲೇ ಯಾದವ್‌ ಪತ್ನಿ ದೇವಿಶಾ ಪ್ರತಿಕ್ರಿಯೆ

Update: 2023-01-08 14:20 IST

ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ತಂಡದ ಭರವಸೆಯ ಆಟಗಾರ ಸೂರ್ಯಕುಮಾರ್‌ ಯಾದವ್‌ ಶ್ರೀಲಂಕಾ ವಿರುದ್ಧದ ಕೊನೆಯ T-20 ಪಂದ್ಯಾಟದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಸಹ ಆಟಗಾರ ಕೆ.ಎಲ್‌ ರಾಹುಲ್‌ ತುಳು ಭಾಷೆಯಲ್ಲಿ ಶುಭಾಶಯ ಕೋರಿ ಸ್ಟೋರಿ ಹಾಕಿದ್ದ ಫೋಟೊ ಈಗ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

ತುಳುವಿನಲ್ಲಿ ʼಬಾರೀ ಎಡ್ಡೆ ಗೊಬ್ಬಿಯʼ ಅಂದರೆ ʼತುಂಬಾ ಚೆನ್ನಾಗಿ ಆಟವಾಡಿದ್ದೀಯಾʼ ಎಂದು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿದ್ದರು. ಇದು ಕೂಡಲೇ ಹಲವಾರು ತುಳುವರ ಗಮನ ಸೆಳೆದಿತ್ತು. ಹಲವರು ಇದನ್ನು ವಿವಿಧ ಸಾಮಾಜಿಕ ತಾಣಗಳಲ್ಲಿ ಶೇರ್‌ ಮಾಡಿದ್ದರು. ಈ ಸ್ಟೇಟಸ್‌ ಗೆ ಸೂರ್ಯಕುಮಾರ್‌ ಯಾದವ್‌ ಪತ್ನಿ ನೀಡಿರುವ ಪ್ರತಿಕ್ರಿಯೆಯೂ ವೈರಲ್‌ ಆಗಿದೆ.

ಸೂರ್ಯಕುಮಾರ್‌ ಪತ್ನಿ ದೇವಿಶಾ ಶೆಟ್ಟಿ ಕೂಡಾ ಮಂಗಳೂರು ಮೂಲದವರಾಗಿದ್ದಾರೆ. ಇದೇ ಸ್ಟೋರಿಯನ್ನು ತಮ್ಮ ಪ್ರೊಫೈಲ್‌ ನಲ್ಲಿ ಶೇರ್‌ ಮಾಡಿದ ಅವರು, "ಚೂರು ತುಳು ಕಲ್ಪಾವೊಡು ಆರೆಗ್‌ ನನ" (ಅವರಿಗಿನ್ನು ಸ್ವಲ್ಪ ತುಳು ಕಲಿಸಬೇಕು") ಎಂದು ಬರೆದಿದ್ದಾರೆ. ಈ ಎರಡೂ ಸ್ಟೋರಿಗಳೂ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿವೆ. 

Similar News