×
Ad

ಉಳ್ಳಾಲ | ಡಿವೈಡರ್ ಗೆ ಬೈಕ್ ಢಿಕ್ಕಿ: ಸಹಸವಾರನ ಮೆದುಳು ನಿಷ್ಕ್ರಿಯ

Update: 2023-01-08 17:05 IST

ಉಳ್ಳಾಲ: ನಿನ್ನೆ ರಾತ್ರಿ ಕುತ್ತಾರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ನ ಸಹ ಸವಾರ ಯುವಕನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ತಿಳಿದು ಬಂದಿದೆ.

ತಂದೆ ಮೃತ ಪಟ್ಟ ಕೆಲವೇ ತಿಂಗಳಲ್ಲಿ ಎದುರಾದ ದುರಂತಕ್ಕೆ ಕುಟುಂಬಸ್ಥರು ಚಿಂತಾಕ್ರಾಂತರಾಗಿದ್ದಾರೆ. ತೊಕ್ಕೊಟ್ಟು ಕೆರೆಬೈಲ್ ನಿವಾಸಿ ಭೂಷಣ್ ರೈ (21) ಮೆದುಳು ನಿಷ್ಕ್ರಿಯಗೊಂಡ ಯುವಕ ಎಂದು ತಿಳಿದು ಬಂದಿದೆ.

ನಿನ್ನೆ ರಾತ್ರಿ ಭೂಷಣ್ ಕಲ್ಲಾಪಿನಲ್ಲಿ ನಡೆಯುತ್ತಿದ್ದ ಬುರ್ದುಗೋಳಿಯ ಕೊರಗಜ್ಜ-ಗುಳಿಗಜ್ಜ ದೈವದ ವಾರ್ಷಿಕ ಕೋಲದಲ್ಲಿ ಭಾಗವಹಿಸಿದ್ದರು. ತಡರಾತ್ರಿ  ಬೈಕ್ ನಲ್ಲಿ ಕುತ್ತಾರು ಕಡೆ ತೆರಳುತ್ತಿದ್ದ ವೇಳೆ ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿ ಹೊಡೆದಿದೆ.

ಈ ಘಟನೆಯಲ್ಲಿ ಸಹ ಸವಾರನಾಗಿದ್ದ ಭೂಷಣ್ ಗಂಭೀರ ಗಾಯಗೊಂಡಿದ್ದು,  ಆತನನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇಂದು ಹೆಚ್ಚಿನ ಚಿಕತ್ಸೆಗಾಗಿ ಮಂಗಳೂರಿನ ಕೆ.ಎಮ್.ಸಿ ಆಸ್ಪತ್ರೆಗೆ ಭೂಷಣ್ ನನ್ನು ರವಾಣಿಸಿದ್ದು, ಅಲ್ಲಿ ವೈದ್ಯರು ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಹೇಳಿದ್ದಾರೆ.

Similar News