ಆ್ಯಂಡ್ರಾಯ್ಡ್ ವಿವಾದ: ಗೂಗಲ್ನಿಂದ ಎನ್ಸಿಎಲ್ಎಟಿ ಆದೇಶದ ವಿರುದ್ಧ ಸುಪ್ರೀಂ ಕೋರ್ಟಿಗೆ ಮೇಲ್ಮನವಿ‌

Update: 2023-01-08 18:09 GMT

ಹೊಸದಿಲ್ಲಿ, ಜ.8: ಆ್ಯಂಡ್ರಾಯ್ಡ್ ವಿಷಯದಲ್ಲಿ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ)ದ ತೀರ್ಪಿಗೆ ತಡೆಯಾಜ್ಞೆಯನ್ನು ನೀಡುವಂತೆ ತನ್ನ ಮನವಿಯನ್ನು ತಿರಸ್ಕರಿಸಿರುವ ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಾಧಿಕರಣ (ಎನ್ಸಿಎಲ್ಎಟಿ)ದ ಆದೇಶದ ವಿರುದ್ಧ ಗೂಗಲ್ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿದೆ.

ಗೂಗಲ್ ಪರ ಹಿರಿಯ ನ್ಯಾಯವಾದಿ ಅಭಿಷೇಕ ಮನು ಸಿಂಘ್ವಿ ಅವರು ಸೋಮವಾರ ಭಾರತದ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಅವರ ಮುಂದೆ ಮೇಲ್ಮನವಿಯನ್ನು ಉಲ್ಲೇಖಿಸುವ ಸಾಧ್ಯತೆಯಿದೆ.

ಗೂಗಲ್ ಕೊನೆಯ ಘಳಿಗೆಯಲ್ಲಿ ತನ್ನ ಬಳಿಗೆ ಬಂದಿದೆ ಮತ್ತು ದಾಖಲೆಗಳು ಬೃಹತ್ ಗಾತ್ರದಲ್ಲಿವೆ ಎಂದು ಅದಕ್ಕೆ ಮಧ್ಯಂತರ ಪರಿಹಾರವನ್ನು ತಿರಸ್ಕರಿಸಿದ ಸಂದರ್ಭ ಎನ್ಸಿಎಲ್ಎಟಿ ಹೇಳಿತ್ತು.

ಜ.4ರಂದು ಗೂಗಲ್ನ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿದ್ದ ಎನ್ಸಿಎಲ್ಎಟಿ ದಂಡದ ಶೇ.10ರಷ್ಟು ಮೊತ್ತವನ್ನು ಠೇವಣಿಯಿರಿಸುವಂತೆ ಸೂಚಿಸಿತ್ತು. ಅದು ಯಾವುದೇ ಮಧ್ಯಂತರ …
ಜ.4ರಂದು ಗೂಗಲ್ನ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿದ್ದ ಎನ್ಸಿಎಲ್ಎಟಿ ದಂಡದ ಶೇ.10ರಷ್ಟು ಮೊತ್ತವನ್ನು ಠೇವಣಿಯಿರಿಸುವಂತೆ ಸೂಚಿಸಿತ್ತು. ಅದು ಯಾವುದೇ ಮಧ್ಯಂತರ ಆದೇಶವನ್ನು ಹೊರಡಿಸಿರಲಿಲ್ಲ. ಅಂತಿಮ ವಿಚಾರಣೆಯನ್ನು ಎ.13ರಂದು ನಿಗದಿಗೊಳಿಸಿತ್ತು.

Similar News