‘‘ಅತಿ ಗಂಭೀರ’’ ಧಾರ್ಮಿಕ ಮತಾಂತರ ಪ್ರಕರಣಕ್ಕೆ ತಮಿಳುನಾಡು ಸರಕಾರದಿಂದ ‘‘ರಾಜಕೀಯ ಬಣ್ಣ’’: ಸುಪ್ರೀಂ ಕೋರ್ಟ್

Update: 2023-01-09 18:04 GMT

ಹೊಸದಿಲ್ಲಿ, ಜ. 9: ‘‘ಅತಿ ಗಂಭೀರ’’ ಧಾರ್ಮಿಕ ಮತಾಂತರ ವಿಷಯಕ್ಕೆಸಂಬಂಧಿಸಿದ ಪ್ರಕರಣವೊಂದಕ್ಕೆ ತಮಿಳುನಾಡು ಸರಕಾರವು ‘‘ರಾಜಕೀಯ ಬಣ್ಣ’’ ಕೊಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಆರೋಪಿಸಿದೆ.

‘‘ಬಲವಂತ, ವಂಚನೆಮತ್ತು ಆಮಿಷದಮೂಲಕ’’ ಧಾರ್ಮಿಕ ಮತಾಂತರ ನಡೆಸುವ ‘‘ಅತಿ ಗಂಭೀರ’’ ವಿಷಯಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ತಮಿಳುನಾಡು ಸರಕಾರ ‘‘ರಾಜಕೀಯ ಬಣ್ಣ’’ ಕೊಡುತ್ತಿದೆ ಎಂದು ನ್ಯಾಯಮೂರ್ತಿಗಳಾದ ಎಮ್.ಆರ್. ಶಾ ಮತ್ತು ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವು ಹೇಳಿತು.

ದೂರುದಾರರಾಗಿರು ವವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ‘‘ಬಿಜೆಪಿ ವಕ್ತಾರ’’ರಾಗಿದ್ದರು, ‘‘ದೇಶದ್ರೋಹದ ಮೊಕದ್ದಮೆಯನ್ನು ಎದುರಿಸುತ್ತಿದ್ದಾರೆ’’ ಮತ್ತು ಈ ಪ್ರಕರಣವು ‘‘ರಾಜಕೀಯ ಪ್ರೇರಿತ’’ವಾಗಿದೆ ಎಂಬುದಾಗಿ ತಮಿಳುನಾಡು ಪರ ವಕೀಲ ಪಿ. ವಿಲ್ಸನ್ ಹೇಳಿದಾಗ ನ್ಯಾಯಾಲಯವು ಮೇಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಸಂವಿಧಾನದ ಲಿಸ್ಟ್ 2 ಎಂಟ್ರಿ 1 ಪ್ರಕಾರ, ಧಾರ್ಮಿಕ ಮತಾಂತರವು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದು ತಮಿಳುನಾಡು ವಕೀಲ ಹೇಳಿದರು. ದೂರುದಾರರು ಆರೋಪಿಸಿರುವಂತೆ, ತಮಿಳುನಾಡಿನಲ್ಲಿ ಯಾವುದೇ ಅಕ್ರಮ ಧಾರ್ಮಿಕ ಮತಾಂತರಗಳು ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ, ತಮಿಳುನಾಡಿನ  2002ರ ಧಾರ್ಮಿಕ ಮತಾಂತರಗಳ ಕುರಿತಕಾನೂನನ್ನು ರದ್ದುಪಡಿಸಲಾಗಿದೆ ಎಂದು ಅವರು ಹೇಳಿದರು.

‘‘ಈ ವಿಷಯವನ್ನು ಶಾಸಕಾಂಗಕ್ಕೆ ಬಿಡಿ. ನಮ್ಮ ರಾಜ್ಯದಲ್ಲಿ ಮತಾಂತರದ ಯಾವುದೇ ಬೆದರಿಕೆಯಿಲ್ಲ. ಇದುರಾಜಕೀಯ ಪ್ರೇರಿತವ್ಯಾಜ್ಯ. ಅವರು (ಉಪಾಧ್ಯಾಯ) ತಮಿಳುನಾಡುರಾಜ್ಯಸರಕಾರವನ್ನು ಪ್ರತಿವಾದಿಯಾಗಿಸಿದ್ದಾರೆ’’ ಎಂದುಅವರುಹೇಳಿದರು.

‘‘ರಾಜಕೀಯ ಬಣ್ಣವನ್ನು ತರಲು ಪ್ರಯತ್ನಿಸಬೇಡಿ. ರಾಜ್ಯಸರಕಾರವು ರಾಜಕೀಯ ಬಣ್ಣವನ್ನು ತರಲು ಬಯಸುತ್ತಿರುವುದು ಇಂದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ನಾವು ಜನರ ಬಗ್ಗೆ ಕಾಳಜಿ ಹೊಂದಿದ್ದೇವೆ. ಈ ರೀತಿಯಲ್ಲಿ ಆಕ್ರೋಶಗೊಳ್ಳಲು ನಿಮಗೆ ಹಲವಾರು ಕಾರಣಗಳಿರಬಹುದು. ಆದರೆ, ಅದನ್ನು ಹೊರಗೆಮಾಡಿ. ನಾವು ನಿರ್ದಿಷ್ಟ ವಿಷಯವೊಂದನ್ನು ಪರಿಶೀಲಿಸುತ್ತಿದ್ದೇವೆ. ಅದು ‘ಎ’, ‘ಬಿ’ ಅಥವಾ ‘ಸಿ’ ಯಾವುದೇ ರಾಜ್ಯವಾಗಿರಬಹುದು. ನಿಮ್ಮ ರಾಜ್ಯದಲ್ಲಿ ಬಲವಂತದ ಅಥವಾ ವಂಚನೆಯ ಧಾರ್ಮಿಕ ಮತಾಂತರಗಳು ನಡೆಯುತ್ತಿದ್ದರೆ ಅದು ಕೆಟ್ಟದು. ಅದು ನಡೆಯುತ್ತಿಲ್ಲವಾದರೆ ಅದು ಒಳ್ಳೆಯದು. ನಾವು ಯಾವುದೋ ಒಂದು ರಾಜ್ಯವನ್ನು ಗುರಿಯಾಗಿಟ್ಟು ಕೊಂಡಿಲ್ಲ’’ ಎಂದು ವಿಲ್ಸನ್‌ರನ್ನು ಉದ್ದೇಶಿಸಿ ನ್ಯಾ. ಶಾ ಹೇಳಿದರು.

ದೂರುದಾರರ ಪೂರ್ವಾಪರಗಳಿಂದ ಏನೂ ಆಗಬೇಕಾಗಿಲ್ಲ ಎಂದು ಅವರು ಹೇಳಿದರು.

ಅಕ್ರಮ ಧಾರ್ಮಿಕ ಮತಾಂತರಗಳ ಸಮಸ್ಯೆಯು ‘ರಾಷ್ಟ್ರೀಯ ಹಿತಾಸಕ್ತಿ’ಗೆ ಸಂಬಂಧಿಸಿದೆ ಎನ್ನುವುದಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸಹಮತ  ವ್ಯಕ್ತಪಡಿಸಿದರು.

Similar News