ಬಾಂಬ್ ಬೆದರಿಕೆಯಿಂದ ಗುಜರಾತಿನಲ್ಲಿಳಿದ ಮಾಸ್ಕೋ-ಗೋವಾ ಚಾರ್ಟರ್ಡ್ ವಿಮಾನ
Update: 2023-01-09 23:35 IST
ಜಾಮನಗರ,ಜ.9: 244 ಪ್ರಯಾಣಿಕರನ್ನು ಹೊತ್ತುಕೊಂಡು ಮಾಸ್ಕೋದಿಂದ ಗೋವಾಕ್ಕೆ ಆಗಮಿಸುತ್ತಿದ್ದ ಚಾರ್ಟರ್ಡ್ ವಿಮಾನವನ್ನು ಗೋವಾ ವಾಯು ಸಂಚಾರ ನಿಯಂತ್ರಕರಿಗೆ ಬಾಂಬ್ ಬೆದರಿಕೆಯ ಕರೆ ಬಂದ ಬಳಿಕ ಗುಜರಾತಿನ ಜಾಮನಗರಕ್ಕೆ ತಿರುಗಿಸಲಾಯಿತು ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.
ವಿಮಾನವನ್ನು ಐಸೊಲೇಷನ್ ಬೇನಲ್ಲಿ ನಿಲ್ಲಿಸಲಾಗಿದೆ ಎಂದು ಜಾಮನಗರ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದರು.
ವಿಮಾನವು ರಾತ್ರಿ 9:49ಕ್ಕೆ ಜಾಮನಗರ (ರಕ್ಷಣಾ) ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದ್ದು,ಎಲ್ಲ ಪ್ರಯಾಣಿಕರನ್ನು ವಿಮಾನದಿಂದ ತೆರವುಗೊಳಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದರು.