×
Ad

ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳ ಜೊತೆಗಾರರಿಗೆ ಬೆಡ್‌ಶೀಟ್ ವಿತರಣೆ

Update: 2023-01-10 17:35 IST

ಮಂಗಳೂರು:  ನಗರದ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜೊತೆಗಾರರಿಗೆ ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್  ನೇತ್ರತ್ವದಲ್ಲಿ ವಿಶೇಷ ಊಟೋಪಚಾರದೊಂದಿಗೆ ಬೆಡ್ ಶೀಟ್‌ಗಳ  ವಿತರಣೆ ಸೋಮವಾರ ನಡೆಯಿತು.
 
ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಪ್ರತಿದಿನ ರಾತ್ರಿ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜೊತೆಗಾರರಿಗೆ ಊಟ ನೀಡುವ ಕಾರುಣ್ಯ ಯೋಜನೆಗೆ ಮಂಗಳೂರಿನ ಕಂಕನಾಡಿ ಮತ್ತು ಬೆಂದೂರ್‌ವೆಲ್‌ನಲ್ಲಿರುವ  ಹಾವ್ ಹಾವ್ ಹೋಟೆಲ್‌ನ  ಮಾಲಕಿ ರೋಝ್ ಅವರು ತಮ್ಮ ಪುತ್ರಿ ಮೆಲಿಸಾ ಅವರ ಹುಟ್ಟುಹಬ್ಬದ ಅಂಗವಾಗಿ ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಒಟ್ಟು 415 ಮಂದಿಗೆ ಊಟ  ಹಾಗೂ ಬೆಡ್‌ಶೀಟ್‌ಗಳನ್ನು ವಿತರಿಸಲಾಯಿತು.
 

ರೋಝ್ ಹಾಗೂ ಮೆಲೀಸ ಅವರನ್ನು ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮೊಹಮ್ಮದ್  ಹನೀಫ್ ಹಾಜಿ ಗೋಳ್ತಮಜಲು ಅಭಿನಂದಿಸಿದರು.

ಎಂಫ್ರೆಂಡ್ಸ್ ಸದಸ್ಯರಾದ ಇಬ್ರಾಹೀಂ ನಂದಾವರ, ಆಶಿಕ್ ಕುಕ್ಕಾಜೆ ,  ಅಬ್ದುಲ್ ಖಾದರ್, ಸರ್ವನ್, ಸೌಹಾನ್ ಎಸ್.ಕೆ., ಸಿಬ್ಬಂದಿ ಅಶ್ಫಾಕ್ ಉಪಸ್ಥಿತರಿದ್ದರು.

ಎಂಫ್ರೆಂಡ್ಸ್ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಸ್ವಾಗತಿಸಿ, ವಂದಿಸಿದರು

Similar News