×
Ad

ಮಂಗಳೂರು: ದಿ ವಾಯ್ಸ್ ಆಪ್ ಬ್ಲಡ್ ಡೋನರ್ಸ್‌ನ ಭಿತ್ತಿ ಪತ್ರ ಅನಾವರಣ

Update: 2023-01-10 18:36 IST

ಪಣಂಬೂರು:  ಮಂಗಳೂರಿನ ದಿ ವಾಯ್ಸ್  ಆಫ್ ಬ್ಲಡ್ ಡೋನರ್ಸ್ ನೇತೃತ್ವದಲ್ಲಿ  ವಫಾ ಎಂಟರ್‌ಪ್ರೈಸಸ್, ಕಾಟಿಪಳ್ಳ ಸಂಘ ಸಂಸ್ಥೆಗಳ ಒಕ್ಕೂಟದ ಅಶ್ರಯದಲ್ಲಿ ಜ.15ರಂದು ನಡೆಯುವ ರಕ್ತದಾನ ಶಿಬಿರ ಅಭಿಯಾನದ ಭಿತ್ತಿಪತ್ರವನ್ನು ಸೋಮವಾರ ಅನಾವರಣಗೊಳಿಸಲಾಯಿತು.

ಜ.15ರಂದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಕಾಟಿಪಳ್ಳದ ಜಾಸ್ಮಿನ್ ಮಹಲ್ ಹಾಗೂ ಬಂದರ್ ಫ್ರೆಂಡ್ಸ್ ಮಂಗಳೂರು ಇವುಗಳ ನೇತೃತ್ವದಲ್ಲಿ ಬಂದರು ಕಸಾಯಿಗಲ್ಲಿಯಲ್ಲಿರುವ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಏಕಕಾಲದಲ್ಲಿ ರಕ್ತದಾನ, ಅಂಗವಿಕಲರಿಗೆ  ಸಹಾಯಹಸ್ತ ಕಾರ್ಯಕ್ರಮ ನಡೆಯಲಿದೆ.

ಫೆ.15ರಂದು ಬೆಂಗ್ರೆಯಲ್ಲಿ ಸಂಸ್ಥೆಯು ಕುರಾನ್‌ದೀನ್ ಎಸೋಸಿಯೇಷನ್ ನೇತೃತ್ವದಲ್ಲಿ ರಕ್ತದಾನ ನಡೆಸಲಿದೆ.

ಈ ಸಂದರ್ಭ ಮಾತನಾಡಿದ ಸಂಸ್ಥೆಯ  ಗೌರವ ಸಲಹೆಗಾರ ಹುಸೈನ್ ಕಾಟಿಪಳ್ಳ  ಮಾತನಾಡಿ, ಬ್ಲಡ್ ಡೋನರ್ಸ್ ಸಂಸ್ಥೆ ಜಾತಿ ಬೇಧವಿಲ್ಲದೆ ಪ್ರಾಣ ಉಳಿಸುವ ಸಲುವಾಗಿ ಸದಾ ರಕ್ತದಾನ ಮಾಡಿ ಇತರರಿಗೆ ಮಾದರಿಯಾಗಿದೆ. ಈಗಾಗಲೇ ಈ ಸಂಸ್ಥೆಯು ಬಡ ಹೆಣ್ಣು ಮಕ್ಕಳ ಮದುವೆ ಸಹಿತ ಅರ್ಹರಿಗೆ ನೆರವು ನೀಡುವಲ್ಲಿ ಸದಾ ಮುಂದಿದೆ. ಇದೀಗ ಮತ್ತೊಮ್ಮೆ ಅಶಕ್ತರ ನೆರವಿಗೆ ನಿಂತಿದೆ ಎಂದರು.

ಸಂಸ್ಥೆಯ  ಪ್ರಮುಖರಾದ  ರುಬಿಯಾ ಅಕ್ತರ್, ಡಾ.ಓಸ್ವಾಲ್ಡ್  ಫುರ್ಟಾಡೋ, ದಿ ವಾಯ್ಸ್  ಆಫ್ ಬ್ಲಡ್ ಡೋನರ್ಸ್ ಮಂಗಳೂರು ಇದರ ಸ್ಥಾಪಕಾಧ್ಯಕ್ಷ ರವೂಫ್ ಬಂದರ್, ಕುರಾನ್ ದೀನ್ ಇದರ ಅಧ್ಯಕ್ಷ ಎಂ.ಕೆ ಅಬ್ದುಲ್ ನಾಸೀರ್, ಬಂದರು ಫ್ರೆಂಡ್ಸ್‌ನ ಪ್ರಮುಖರಾದ  ಜೆ.ಅಲ್ತಾಫ್, ಎಂ.ಕೆ ಫಯಾಝ್, ವಿಮೆನ್ಸ್ ವಿಂಗ್‌ನ ಆಲಿಶಾ ಅಮೀನ ಉಪಸ್ಥಿತರಿದ್ದರು.

Similar News