×
Ad

ಉಡುಪಿ: ಹೆಬ್ಬಾವಿನ ರಕ್ಷಣೆ

Update: 2023-01-10 18:45 IST

ಉಡುಪಿ: ಇಲ್ಲಿನ ಬೀಡಿನಗುಡ್ಡೆ ಸಮೀಪದ ಮೈದಾನ ಸಮೀಪ ಸಾರ್ವಜನಿಕರು ಹಾಗೂ ವಲಸೆ ಕಾರ್ಮಿಕರು ಇರುವ ಸ್ಥಳದಲ್ಲಿ ಗಿಡಗಂಟಿಗಳು ಬೆಳೆದ ಸ್ಥಳದಲ್ಲಿ ಹೆಬ್ಬಾವಿನ ವಾಸಸ್ಥಳವಾಗಿದ್ದು, ಒಂದೇ ಕಡೆ ನಾಲ್ಕು ಹೆಬ್ಬಾವು ಕಂಡುಬಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.  

ಉರಗ ತಜ್ಞರಾದ ಯು. ಬಿ. ನಾಗರಾಜ ರಾವ್ ಸ್ಥಳಕ್ಕೆ ಆಗಮಿಸಿ ಎರಡು ಹೆಬ್ಬಾವವನ್ನು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಡಲಾಯಿತು. 

ಸುಮಾರು 10, 12 ಅಡಿ ಉದ್ದದ ಹೆಬ್ಬಾವು ಇದ್ದು, ಹೆಬ್ಬಾವು ರಕ್ಷಣಾ ಕಾರ್ಯದಲ್ಲಿ ಸಮಾಜಸೇವಕರಾದ ನಿತ್ಯಾನಂದ ಒಳಕಾಡು  ಮಾನವೀಯತೆ ಮೆರೆದರು.

Similar News