×
Ad

ಶಿರ್ವ: ಪತಿಯಿಂದ ಹಲ್ಲೆ-ಆರೋಪ

Update: 2023-01-10 21:18 IST

ಶಿರ್ವ: ಗಂಡ ಹಲ್ಲೆ ನಡೆಸಿದ್ದಾಗಿ ಶೋಭಾ ಎನ್ನುವವರು ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ರವಿ ಕುಲಾಲ್ ಎಂಬವರೊಂದಿಗೆ ಮದುವೆಯಾಗಿ 22 ವರ್ಷವಾಗಿದ್ದು, ಇಬ್ಬರು  ಮಕ್ಕಳಿದ್ದಾರೆ. ಶೋಭಾ ಶಂಕರಪುರದ ಬ್ಲಾಕ್ ಫ್ಯಾಕ್ಟರಿಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಪತಿಯು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡುತ್ತಿದ್ದು, ಖರ್ಚಿಗೆ ಹಣವನ್ನು ನೀಡುತ್ತಿರಲಿಲ್ಲ ಎಂದು ದೂರಿದ್ದಾರೆ. 

ರವಿ ತನ್ನ  ಹೆಸರಿನಲ್ಲಿದ್ದ 10 ಸೆಂಟ್ಸ್ ಜಾಗದಲ್ಲಿ  5 ಸೆಂಟ್ಸ್ ಜಾಗವನ್ನು ಪತ್ನಿ ಮಕ್ಕಳ ಹೆಸರಿಗೆ ಮಾಡಿಕೊಟ್ಟಿದ್ದು, ಆ  ಸ್ಥಳದಲ್ಲಿ ಮನೆಕಟ್ಟಲು ಬೇಕಾದ ಸಾಮಾಗ್ರಿ ತರಿಸಿದ್ದನ್ನು ಕಂಡು ಕೋಪಗೊಂಡ ಪತಿ ರಾಡ್ ನಲ್ಲಿ ಹಲ್ಲೆ  ನಡೆಸಿದ್ದಾಗಿ ಆರೋಪಿಸಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News