×
Ad

ಉಡುಪಿ: ಅಡಿಕೆ ಮರದಿಂದ ಬಿದ್ದು ಮೃತ್ಯು

Update: 2023-01-11 21:07 IST

ಶಂಕರನಾರಾಯಣ: ಅಡಿಕೆ ಕೊಯ್ಯಲು ಬೇರೆಯವರ ತೋಟಕ್ಕೆ ಹೋದ ವ್ಯಕ್ತಿ ಅಡಿಕೆಮರದಿಂದ ಅಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಸಿದ್ದಾಪುರ ಗ್ರಾಮದ ಚೀನಾಬೇರು ಎಂಬಲ್ಲಿ ನಡೆದಿದೆ.

ಯಡಮೊಗೆ ನಿವಾಸಿ ಬಾಬು ನಾಯ್ಕ (60) ಮೃತ ದುರ್ದೈವಿ. ಅಡಿಕೆ ಮರದಿಂದ ಅಡಿಕೆ ಕೊಯ್ಯುತ್ತಿರುವಾಗ ಅಕಸ್ಮಾತ್  ಬಿದ್ದರು. ಈ ಹಿನ್ನೆಲೆಯಲ್ಲಿ ಗಂಭೀರ ಗಾಯಗೊಂಡ ಬಾಬು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿದ್ದಾಪುರದ  ಸರಕಾರಿ  ಆಸ್ಪತ್ರೆಗೆ  ಕರೆದೊಯ್ಯಲಾಗಿದೆ.

ಆ ಬಳಿಕ ಅಲ್ಲಿಂದ ಕುಂದಾಪುರ ಸರಕಾರಿ  ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ  ಹೆಚ್ಚಿನ  ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಹೋಗುವ ದಾರಿ ಮದ್ಯೆ ಮೃತಪಟ್ಟಿದ್ದಾರೆ. 

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News