×
Ad

ಮಂಗಳೂರು: ಘೂಮರ್ ರಾಜಸ್ತಾನಿ ಥಾಲಿ ರೆಸ್ಟೋರೆಂಟ್ ಶುಭಾರಂಭ

Update: 2023-01-11 21:08 IST

ಮಂಗಳೂರು: ಉತ್ತರ ಭಾರತದಲ್ಲಿ ಜನಪ್ರಿಯವಾಗಿರುವ ರಾಜಸ್ತಾನಿ  ಸಾಂಪ್ರದಾಯಿಕ ಥಾಲಿ ರೆಸ್ಟೋರೆಂಟ್ ಸಮೂಹ ಘೂಮರ್  ದಕ್ಷಿಣ ಭಾರತದಲ್ಲಿ ತನ್ನ ಮೊದಲ ರೆಸ್ಟೋರೆಂಟ್ ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನ 4 ನೇ ಮಹಡಿಯಲ್ಲಿ ಬುಧವಾರ  ಶುಭಾರಂಭಗೊಂಡಿದೆ. ಮೇಯರ್ ಜಯಾನಂದ್ ಅಂಚನ್ ರೆಸ್ಟೋರೆಂಟ್ ಅನ್ನು ಉದ್ಘಾಟಿಸಿದರು. 

ಕ್ರೆಡೈ ಅಧ್ಯಕ್ಷ ಪುಷ್ಪರಾಜ್ ಜೈನ್ ಹಾಗು ಕೆನರಾ ಚೆಂಬರ್ ಆಫ್  ಕಾಮರ್ಸ್ ಆ್ಯಂಡ್ ಇಂಡಸ್ರೀಸ್ ನ ಅಧ್ಯಕ್ಷ ಎಂ.ಗಣೇಶ್ ಕಾಮತ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ಮೊಹತಿಶ್ಯಾಮ್ ಕಾಂಪ್ಲೆಕ್ಸಸ್ ಪ್ರೈ. ಲಿ. ನ ಆಡಳಿತ ನಿರ್ದೇಶಕ  ಎಸ್.ಎಂ. ಅರ್ಶದ್ ಮತ್ತು ನಿರ್ದೇಶಕ ಎಸ್.ಎಂ.ಸೌದ್, ಆರ್ಕಿಟೆಕ್ಟ್ ಧರ್ಮರಾಜ್, ಅಲೆಗ್ರೊ ಬಿಲ್ಡರ್ಸ್ ನ ಡಿ.ಬಿ. ಮೆಹ್ತಾ, ರಫೀಕ್ ಅಸದಿ ಉಪಸ್ಥಿತರಿದ್ದರು. 

"ನಮ್ಮಲ್ಲಿ ರಾಜಸ್ತಾನಿ ಸಾಂಪ್ರದಾಯಿಕ ಥಾಲಿ ಊಟದ ವ್ಯವಸ್ಥೆಯಿದೆ. ಇದರಲ್ಲಿ ಹಲವಾರು ವೈವಿಧ್ಯಮಯ, ರುಚಿಯಾದ ಖಾದ್ಯಗಳಿವೆ.  ನಿಗದಿತ ಬೆಲೆಯ ಥಾಲಿಯಲ್ಲಿ ಮಿತಿ ಇಲ್ಲದೆ ಖಾದ್ಯಗಳನ್ನು ಬಡಿಸಲಾಗುತ್ತದೆ. ಜನರು ಬಂದು ಆಕರ್ಷಕ ವಿನ್ಯಾಸದ ಹೋಟೆಲ್ ನಲ್ಲಿ ಕುಳಿತುಕೊಂಡು ನೆಮ್ಮದಿಯಿಂದ ಊಟ ಮಾಡಿ ಹೋಗುವಂತಹ ರೆಸ್ಟೋರೆಂಟ್ ಇದು. ದೇಶದಲ್ಲಿ ನಮ್ಮ 26ನೇ ರೆಸ್ಟೋರೆಂಟ್ ಇದಾಗಿದೆ " ಎಂದು ಘೂಮರ್ ಮಾಲಕ ಸಂತೋಷ್ ತ್ಯಾ ಗಿ ​ಮಾಹಿತಿ ನೀಡಿದರು.

Similar News